– ಜೂನ್, ಜುಲೈನಲ್ಲಿ ತಮಿಳುನಾಡಿಗೆ ಈ ಪ್ರಮಾಣದ ನೀರು ಹರಿದಿರಲಿಲ್ಲ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದ್ದು, ಕೆಆರ್‌ಎಸ್ ಡ್ಯಾಂ (KRS Dam) ತುಂಬಿದೆ. ಹೀಗಾಗಿ, ಜುಲೈನಲ್ಲೇ ತಮಿಳುನಾಡಿಗೆ (Tamil Nadu) ದಾಖಲೆ ಪ್ರಮಾಣದ ನೀರು ಹರಿಬಿಡಲಾಗಿದೆ.
ಜೂನ್‌ನಲ್ಲೇ ಭರ್ತಿಯಾಗಿ ಕೆಆರ್‌ಎಸ್ ಡ್ಯಾಂ ದಾಖಲೆ ಬರೆದಿತ್ತು. ಈಗ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಹರಿಸಿದೆ. ಜುಲೈನಲ್ಲೇ ಈ ರಾಜ್ಯಕ್ಕೆ 100 ಟಿಎಂಸಿ ನೀರನ್ನು ರಿಲೀಸ್ ಮಾಡಲಾಗಿದೆ. ತಮಿಳುನಾಡಿಗೆ ಸೇರಿದ ನೀರಿನಿಂದಲೂ ವಿಶೇಷ ದಾಖಲೆಯಾಗಿದೆ. ಇದನ್ನೂ ಓದಿ: ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ಮಹಿಳೆ ಸಾವು
ಜೂನ್ ಹಾಗೂ ಜುಲೈನಲ್ಲಿ ಇಷ್ಟು ಪ್ರಮಾಣದ ನೀರು ತಮಿಳುನಾಡಿಗೆ ಹರಿದಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ವರ್ಷದಲ್ಲಿ 177.25 ಟಿಎಂಸಿ ನೀರು ಕೊಡಬೇಕು. ಒಂದೇ ತಿಂಗಳಿನಲ್ಲಿ ಆ ರಾಜ್ಯಕ್ಕೆ ಶೇ.56ರಷ್ಟು ನೀರು ಸೇರಿದೆ.
ಜೂನ್‌ನಲ್ಲಿ 9, ಜುಲೈನಲ್ಲಿ 31 ಟಿಎಂಸಿ ನೀರು ಕೊಡಬೇಕಿತ್ತು. ಎರಡು ತಿಂಗಳ ಕೋಟಗಿಂತ 60 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್‌ಎಸ್ ಹಾಗೂ ಕಬಿನಿ ಎರಡು ಜಲಾಶಯಗಳಿಂದ 100 ಟಿಎಂಸಿ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಈಗಲೂ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!
ಎರಡು ಡ್ಯಾಂ ಭರ್ತಿ ಹಿನ್ನೆಲೆ ಒಳ ಹರಿವಿನಷ್ಟೇ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಕಾವೇರಿ ನೀರಿಗಾಗಿ ಈ ವರ್ಷ ತಮಿಳುನಾಡಿನ ಕ್ಯಾತೆ ಇರೋದಿಲ್ಲ.