KRS ಡ್ಯಾಂ ಮತ್ತೊಂದು ದಾಖಲೆ

Public TV
1 Min Read

ಮಂಡ್ಯ: ಈ ಬಾರಿ ವರುಣನ ಕೃಪಾಕಟಾಕ್ಷದಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂ (KRS Dam) ದಾಖಲೆಯ ಮೈಲಿಗಲ್ಲುಗಳನ್ನು ತಲುಪುತ್ತಿದೆ. ಅದೇ ರೀತಿ ಇದೀಗ ಕೆಆರ್‌ಎಸ್ ಅಣೆಕಟ್ಟೆ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.

ಕೆಆರ್‌ಎಸ್ ಅಣೆಕಟ್ಟೆ ಬರೋಬ್ಬರಿ 150 ದಿನಗಳ ಕಾಲ ಗರಿಷ್ಠ ಮಟ್ಟವನ್ನು ಕಾಯ್ದಿರಿಸಿಕೊಳ್ಳುವ ಮೂಲಕ ನೂತನ ದಾಖಲೆ ಬರೆದಿದೆ. ಈ ಬಾರಿ ವರುಣ ಕೃಪಾಕಟಾಕ್ಷದಿಂದ ಜೂನ್ ತಿಂಗಳಲ್ಲೆ ಕನ್ನಂಬಾಡಿ ಕಟ್ಟೆ ದಾಖಲೆ ಬರೆದಿತ್ತು. ಇದೀಗ ಅಂತಹದ್ದೆ ದಾಖಲೆಯನ್ನು ನಿರ್ಮಾಣ ಮಾಡಿದೆ. ಇದನ್ನೂ ಓದಿ: ಸಚಿವ ಪ್ರಿಯಾಂಕ್‌ ಖರ್ಗೆ ತವರಿನಲ್ಲಿ ಇಂದು RSS ಪಥಸಂಚಲನ!

124.80 ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಅಣೆಕಟ್ಟೆ ಕಳೆದ 150 ದಿನಗಳಿಂದಲೂ ಅದೇ ಮಟ್ಟವನ್ನು ಕಾಯ್ದಿರಿಸಿಕೊಂಡಿದೆ. ಇದನ್ನೂ ಓದಿ: ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್‌ಸಿಗ್ನಲ್; ಜಾತಿ ಆಧರಿಸಿ ಹೊಸಮುಖಗಳಿಗೆ ಸಚಿವ ಸ್ಥಾನ?

Share This Article