KRS ಹೊರ ಹರಿವಿನಲ್ಲಿ ಭಾರೀ ಇಳಿಕೆ- ಇತ್ತ ಕೃಷ್ಣಾ ನದಿ ಪಾತ್ರದಲ್ಲಿ ತಗ್ಗಿದ ಪ್ರವಾಹ ಆತಂಕ

Public TV
1 Min Read

ಮಂಡ್ಯ/ಯಾದಗಿರಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಮಳೆ ಹಿನ್ನೆಲೆಯಲ್ಲಿ ಕೆಆರ್‍ಎಸ್ ಡ್ಯಾಂನಿಂದ ಹೊರ ಹರಿವಿನಲ್ಲಿ ಭಾರೀ ಇಳಿಕೆಯಾಗಿದೆ. 74 ಸಾವಿರ ಕ್ಯೂಸೆಕ್ ನಿಂದ 3 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ.

ಮಳೆ ಕಡಿಮೆಯಾಗಿರೊದ್ರಿಂದ ಒಳ ಹರಿವು ಕೂಡ ಕಡಿಮೆಯಾಗುತ್ತಿದ್ದು, ಡ್ಯಾಂ ಭರ್ತಿಮಾಡಿಕೊಳ್ಳುವ ಸಲುವಾಗಿ ಅಧಿಕಾರಿಗಳು ಹೊರ ಹರಿವು ಇಳಿಸಿದ್ದಾರೆ. ಡ್ಯಾಂ ಸಂಪೂರ್ಣ ಭರ್ತಿಯಾಗಲು ಇನ್ನೂ 4 ಅಡಿ ಬಾಕಿ ಇದೆ.

ಪ್ರಸ್ತುತ 121.12 ಅಡಿ ಭರ್ತಿಯಾಗಿರುವ ಕೆಎಆರ್‍ಎಸ್, ಸುರಕ್ಷಿತಾ ದೃಷ್ಟಿಯಿಂದ ಡ್ಯಾಂ ತುಂಬುವ ಮುನ್ನವೇ ನದಿಗೆ ನೀರು ಬಿಡಲಾಗುತ್ತಿತ್ತು. ಮೂರ್ನಾಲ್ಕು ದಿನಗಳ ಕಾಲ ಅಧಿಕಾರಿಗಳು 74 ಕ್ಯೂಸೆಕ್ ನೀರು ಬಿಡುತ್ತಿದ್ದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಡ್ಯಾಂ ಇಂದಿನ ನೀರಿನ ಮಟ್ಟ 121.12 ಅಡಿ ಇದೆ. ಗರಿಷ್ಟ ಮಟ್ಟ 124.80 ಅಡಿ, ಒಳ ಹರಿವು 40,794 ಕ್ಯೂಸೆಕ್, ಹೊರ ಹರಿವು- 3575 ಕ್ಯೂಸೆಕ್, ನೀರಿನ ಸಂಗ್ರಹ-44.479, ಗರಿಷ್ಠ ಸಂಗ್ರಹ ಸಾಮರ್ಥ್ಯ 49.50 ಟಿಎಂಸಿ ಆಗಿದೆ.

ಇತ್ತ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಆತಂಕ ದೂರವಾಗಿದೆ. ಬಸವಸಾಗರ ಜಲಾಶಯದಿಂದ ಹೊರ ಬಿಡುವ ನೀರನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ನಿನ್ನೆ 1.50 ಲಕ್ಷ ಕ್ಯೂಸೆಕ್ ಹೊರ ಹರಿವು ಇದ್ದು, ಈಗ 25,670 ಕ್ಯೂಸೆಕ್ ಆಗಿದೆ. ಬಸವಸಾಗರ ಜಲಾಶಯಕ್ಕೆ ಸದ್ಯ 40000 ಒಳ ಹರಿವು ಇದೆ. ಜಲಾಶಯದಲ್ಲಿ 29 ಟಿಎಂಸಿ ಮತ್ತು 491.45 ಮೀಟರ್ ನೀರು ಸಂಗ್ರಹವಾಗಿದ್ದು, ಜಲಾಶಯ ಒಟ್ಟು 33.313 ಟಿಎಂಸಿ, 492.25 ಮೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *