ಪತಿಯಿಂದಲೇ ವೈದ್ಯೆ ಹತ್ಯೆ ಕೇಸ್‌ – ಯುವತಿಯರ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ!

Public TV
1 Min Read

ಬೆಂಗಳೂರು: ವೈದ್ಯೆಯಾಗಿದ್ದ ಪತ್ನಿ ಕೃತಿಕಾ ರೆಡ್ಡಿಯನ್ನು ಕೊಲೆ (Krithika Reddy Murder Case) ಮಾಡಿದ್ದ ಹಂತಕ ಡಾಕ್ಟರ್ ಮಹೇಂದ್ರ ರೆಡ್ಡಿಯ ಕರಾಳ ಮುಖ ತನಿಖೆಯ ವೇಳೆ ಬಯಲಾಗುತ್ತಿದೆ. ವೃತ್ತಿಯಲ್ಲೂ ಇಬ್ಬರೂ ವೈದ್ಯರಾಗಿದ್ದರೂ ಕೂಡ ಪತ್ನಿಯನ್ನು ಯಾಕೆ ಕೊಲೆ ಮಾಡಿದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಮಹೇಂದ್ರ ರೆಡ್ಡಿ ಮದುವೆಗೂ ಮುನ್ನ ಮತ್ತು ಮದುವೆ ನಂತರವು ಬೇರೆ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ(Illicit Relationship) ಹೊಂದಿದ್ದ ವಿಚಾರ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

 

ಆರೋಪಿಯ ಅಕ್ರಮ ಸಂಬಂಧದ ಬಗ್ಗೆ ಕೃತಿಕಾ ಪೋಷಕರು ಕೂಡ ಆರೋಪಿಸಿದ್ದರು. ಕರ್ನಾಟಕ, ಮುಂಬೈ ಸೇರಿ ಹಲವು ಕಡೆ ಬೇರೆ ಬೇರೆ ಹೆಣ್ಣು ಮಕ್ಕಳ ಜೊತೆಯಲ್ಲಿ ಬಹಳ ಸಲುಗೆಯಿಂದ ಇದ್ದ ಎನ್ನುವುದು ಈಗ ಬಹಿರಂಗವಾಗಿದೆ.

ಬೆಂಗಳೂರು (Bengaluru) ಸೇರಿ ಹತ್ತಿರ ಹತ್ತಿರ ಅರ್ಧ ಡಜನ್ ಹೆಣ್ಣುಮಕ್ಕಳ ಜೊತೆ ಚೆಲ್ಲಾಟ ಆಡಿರುವ ವಿಚಾರ ಪೊಲೀಸರ ತನಿಖೆಯಿಂದ ಬಯಲಾಗಿದೆ. ಪೊಲೀಸರು ಈಗ ಅಕ್ರಮ ಸಂಬಂಧದ ಕಾರಣಕ್ಕಾಗಿ ಹತ್ಯೆ ಮಾಡಿದ್ದಾನಾ ಎನ್ನುವುದನ್ನು ದೃಢಪಡಿಸಲು ಆರೋಪಿಯ ಪೋನ್ ಸಿಡಿಆರ್ , ಕಾಲ್ ಲಿಸ್ಟ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾಗಿದ್ದಾರೆ.

Share This Article