ಮಾಲಿವುಡ್‌ಗೆ ‘ಉಪ್ಪೇನ’ ನಟಿ- ಟೊವೀನೋ ಥಾಮಸ್‌ಗೆ ಕೃತಿ ಶೆಟ್ಟಿ ನಾಯಕಿ

Public TV
1 Min Read

ರಾವಳಿ ನಟಿ ಕೃತಿ ಶೆಟ್ಟಿ(Krithi Shetty) ತೆಲುಗಿನಲ್ಲಿ ಮಿಂಚಿದ ಬಳಿಕ ಮಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಮಲಯಾಳಂ (Mollywood) ಸಿನಿಮಾದಲ್ಲಿ ಕೃತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಉಪ್ಪೇನ ಸುಂದರಿ ಕೃತಿ ಶೆಟ್ಟಿ, ಮಾಲಿವುಡ್ ನಟ ಟೊವೀನೋ ಥಾಮಸ್‌ಗೆ (Tovino Thomas) ಜೊತೆಯಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ನಟ ಟೊವೀನೋ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕೃತಿ ಅವರನ್ನು ಲಕ್ಷ್ಮಿಯಾಗಿ ಪರಿಚಯಿಸುತ್ತಿದ್ದೇವೆ ಎಂದಿದ್ದಾರೆ. ಜೊತೆಗೆ ಚಿತ್ರದಲ್ಲಿನ ನಾಯಕಿಯ ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಚಿತ್ರಕ್ಕೆ ‘ಎಆರ್‌ಎಂ’ (ARM) ಎಂದು ಟೈಟಲ್‌ ಇಡಲಾಗಿದೆ.

ವಿಭಿನ್ನ ಪ್ರೇಮಕತೆಯಲ್ಲಿ ಲಕ್ಷ್ಮಿಯಾಗಿ ಕೃತಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಮಲೆಯಾಳಿ ಹುಡುಗಿಯಂತೆ ಕಾಣಿಸಿಕೊಂಡು, ಕಿವಿಗೆ ಝಮುಕಿಗಳನ್ನು ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಾಲಿವುಡ್ ಚಿತ್ರರಂಗಕ್ಕೆ ಕೃತಿ ಎಂಟ್ರಿ ಕೊಡ್ತಿದ್ದಾರೆ. ಮೊದಲ ಬಾರಿಗೆ ಟೊವೀನೋ ಥಾಮಸ್ ಜೊತೆ ಕಾಣಿಸಿಕೊಳ್ತಿರೋದ್ರಿಂದ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಇದನ್ನೂ ಓದಿ:ಸಿಂಪಲ್ ಸ್ಟಾರ್ ಮದುವೆ ಯಾವಾಗ? ರಕ್ಷಿತ್ ಶೆಟ್ಟಿ ಸ್ಪಷ್ಟನೆ

ತೆಲುಗಿನ ಹೀರೋ ಶರ್ವಾನಂದ್ 35ನೇ ಚಿತ್ರಕ್ಕೂ ಕೂಡ ಕೃತಿ ಶೆಟ್ಟಿ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್