ಡಾರ್ಲಿಂಗ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಹಸೆಮಣೆ ಏರಲು ಸಜ್ಜಾದ ಪ್ರಭಾಸ್

Public TV
1 Min Read

ಟಾಲಿವುಡ್ ನಟ ಪ್ರಭಾಸ್ (Prabhas) ಬಗ್ಗೆ ಆಗಾಗ ಚರ್ಚೆಗೆ ಗ್ರಾಸವಾಗುವ ವಿಚಾರ ಅಂದರೆ ಮದುವೆ (Wedding)  ಸುದ್ದಿ. ಡಾರ್ಲಿಂಗ್ ಹೀರೋ ಮದುವೆ ಯಾವಾಗ? ಎಂದು ಕಾದು ಕೂತಿರೋ ಫ್ಯಾನ್ಸ್‌ಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಬಾಹುಬಲಿ ನಟ ಹಸೆಮಣೆ ಏರಲಿದ್ದಾರೆ.

ಸಾಕಷ್ಟು ವರ್ಷಗಳಿಂದ ಪ್ರಭಾಸ್ ಮದುವೆ ಮ್ಯಾಟರ್ ಚಾಲ್ತಿಯಲ್ಲಿದೆ. ಇಂದಲ್ಲ, ನಾಳೆ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಕಾತರದಿಂದ ಕಾಯುತ್ತಲೇ ಇದ್ದಾರೆ. ಇದೀಗ ಪ್ರಭಾಸ್, ದೊಡ್ಡಮ್ಮ ಶ್ಯಾಮಲಾ ಅವರು ನವರಾತ್ರಿ ಉತ್ಸವದ ಸಂದರ್ಭದ ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಭಾಸ್ ಮದುವೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ಪ್ರಭಾಸ್ ಮದುವೆ ಯಾವಾಗ? ಹುಡುಗಿ ಯಾರು ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ಪ್ರಭಾಸ್‌ಗೆ 100% ಮದುವೆಯಾಗುತ್ತದೆ. ಮುಂದಿನ ದಸರಾ ಒಳಗೆ ಪ್ರಭಾಸ್ ಮದುವೆ ನೆರವೇರುತ್ತದೆ ಎಂದು ಶ್ಯಾಮಲಾ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಅನುಷ್ಕಾ ಶೆಟ್ಟಿ (Anushka Shetty) ಜೊತೆ ಪ್ರಭಾಸ್ ಹೆಸರು ಸುದ್ದಿಯಾಗಿತ್ತು. ಬಳಿಕ ಕೃತಿ ಸನೋನ್ (Kriti Sanon) ಜೊತೆ ಮದುವೆ ನಿಶ್ಚಿಯ ಆಗಿದೆ ಎಂದೇ ಹೇಳಲಾಗಿತ್ತು. ಈ ಬಗ್ಗೆ ಇಂದಿಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅನುಷ್ಕಾ ಅಥವಾ ಕೃತಿ ಜೊತೆ ಪ್ರಭಾಸ್ ಮದುವೆ ಎಂದು ಫ್ಯಾನ್ಸ್ ಕಣ್ಣು ಅರಳಿಸಿ ನೋಡಿದ್ದೇ ಆಯ್ತು. ಆದರೆ ಮದುವೆ ಬಗ್ಗೆ ಗುಡ್ ನ್ಯೂಸ್ ಸಿಗಲೇ ಇಲ್ಲ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್