ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

Public TV
1 Min Read

ನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ ಪರಿಕಲ್ಪನೆಗಳೊಂದಿಗೆ ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ’.

ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರೂ ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

‘ಜಾನಕಿ ಸಂಸಾರ’ (Janaki Samsara) ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, ‘ಕೃಷ್ಣರುಕ್ಮಿಣಿ’ ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು (Anjana Srinivas) 13 ವರ್ಷಗಳ ಬಳಿಕ ಮತ್ತೊಮ್ಮೆ ನಿಮ್ಮನ್ನೆಲ್ಲ ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೂರಜ್ ಹೊಳಲು, ಕಾವ್ಯ ಶಾಸ್ತ್ರಿ(Kavya Shastry), ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.

ಶುರುವಾಗುತ್ತಿದೆ ನೋವು-ನಲಿವನು ತೂಗೋ ಹೊಸ ಧಾರಾವಾಹಿ ‘ಜಾನಕಿ ಸಂಸಾರ’ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ತಪ್ಪದೇ ವೀಕ್ಷಿಸಿ.

Share This Article