ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಜವನೆರ್ ಬೆಂಗಳೂರಿನ ಆಶ್ರಯದಲ್ಲಿ ಭಾನುವಾರ ಅದ್ದೂರಿಯಾಗಿ ‘ಅಸ್ಟೆಮಿದ ಐಸಿರಿ’ ಮೊಸರು ಕುಡಿಕೆ ಉತ್ಸವ ಬೆಂಗಳೂರಿನಲ್ಲಿ ನಡೆಯಿತು.
ವಿಜಯನಗರದ ಬಂಟರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲಿವೇಷ, ನೃತ್ಯ ಚೆಂಡೆ, ಭಜನಾ ಸಂಕೀರ್ತನೆ, ಮೊಸರು ಕುಡಿಕೆ, ತುಳುನಾಡಿನ ಆಹಾರ ಖಾದ್ಯ, ಕಂಗೀಲು ನೃತ್ಯ, ಮಹಿಷಮರ್ಧಿನಿ ರೂಪಕ, ತುಳು ನಾಟಕ ಹಾಗೂ ತುಳು ಲಿಪಿ ಕಾರ್ಯಾಗಾರ ಪ್ರಮುಖ ಆಕರ್ಷಣೆಗಳಾಗಿದ್ದವು. ಇದನ್ನೂ ಓದಿ: 2023ರಿಂದ ಅಯೋಧ್ಯೆ ರಾಮಮಂದಿರದಲ್ಲಿ ದೇವರ ದರ್ಶನ
ಮಕ್ಕಳಿಗಾಗಿ ಮುದ್ದು ರಾಧಾ-ಕೃಷ್ಣ ವೇಷ ಹಾಗೂ ಆಟಗಳನ್ನು ಆಡಿಸಲಾಯಿತು. ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಅಡ್ಡಕಂಬ ಸ್ಪರ್ಧೆ, ಹಾಳೆ ಸೋಗೆ ದಂಪತಿ ಸ್ಪರ್ಧೆ, ರಸಪ್ರಶ್ನೆ ಹಾಗೂ ಇತರ ತುಳುನಾಡಿನ ಆಟೋಟಗಳಲ್ಲಿ ನೆರೆದವರು ತೊಡಗಿಸಿಕೊಂಡರು. ಇದನ್ನೂ ಓದಿ: ಅಕ್ಟೋಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

 
			

 
		 
		 
                                
                              
		