ಶಾಹಿ ಈದ್ಗಾ ಮಸೀದಿಯನ್ನ ʻವಿವಾದಿತ ರಚನೆʼ ಅಂತ ಉಲ್ಲೇಖಿಸುವಂತೆ ಮನವಿ – ಹಿಂದೂ ಪರ ವಕೀಲರ ಅರ್ಜಿ ವಜಾ

Public TV
1 Min Read

ಪ್ರಯಾಗರಾಜ್: ಕೃಷ್ಣ ಜನ್ಮಭೂಮಿ ಪ್ರಕರಣದ (Krishna Janmabhoomi case) ಮುಂದಿನ ಎಲ್ಲಾ ವಿಚಾರಣೆಗಳಲ್ಲಿ ಶಾಹಿ ಈದ್ಗಾ ಮಸೀದಿಯನ್ನು ʻವಿವಾದಿತ ರಚನೆʼ ಎಂದು ಉಲ್ಲೇಖಿಸುವಂತೆ ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad HC) ಶುಕ್ರವಾರ ವಜಾಗೊಳಿಸಿದೆ.

ಶಾಹಿ ಈದ್ಗಾ ಮಸೀದಿಯನ್ನು (Shahi Idgah Mosque) “ವಿವಾದಿತ ರಚನೆ” ಎಂದು ಘೋಷಿಸಬೇಕೆಂಬ ಹಿಂದೂ ಕಡೆಯ ಕೋರಿಕೆಯ ಮೇರೆಗೆ ನ್ಯಾಯಾಲಯವು ತನ್ನ ನಿರ್ಧಾರ ಪ್ರಕಟಿಸಿದೆ. ಈ ವಿನಂತಿಯನ್ನು ಸಲ್ಲಿಸಿದ್ದ ಅರ್ಜಿ A-44 ಅನ್ನು ತಿರಸ್ಕರಿಸಲಾಯಿತು. ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ನೇತೃತ್ವದ ಪೀಠವು ಅರ್ಜಿಯನ್ನು “ಈ ಹಂತದಲ್ಲಿ” ವಜಾಗೊಳಿಸಲಾಗುತ್ತಿದೆ ಎಂದು ಮೌಖಿಕವಾಗಿ ಹೇಳಿದೆ. ಇದನ್ನೂ ಓದಿ: ಪತಂಜಲಿ ಚವನ್‌ಪ್ರಾಶ್ ಉತ್ಪನ್ನದ ಜಾಹೀರಾತು ನಿಲ್ಲಿಸಲು ದೆಹಲಿ ಹೈಕೋರ್ಟ್ ಸೂಚನೆ

Allahabad high court

ಮೊಕದ್ದಮೆ ಸಂಖ್ಯೆ 13 ರಲ್ಲಿ, ಅರ್ಜಿದಾರರಾದ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರು ಶಾಹಿ ಮಸೀದಿಯನ್ನು ವಿವಾದಿತ ರಚನೆ (Disputed Structure) ಎಂದು ಘೋಷಿಸಲು ಅರ್ಜಿ ಸಲ್ಲಿಸಿದ್ದರು. ಅರ್ಜಿ A-44ರ ಮೂಲಕ, ಅರ್ಜಿದಾರರು ಮೂಲ ಪ್ರಕರಣದ ಭವಿಷ್ಯದ ಎಲ್ಲಾ ವಿಚಾರಣೆಗಳಲ್ಲಿ ʻಶಾಹಿ ಈದ್ಗಾ ಮಸೀದಿʼ ಬದಲಿಗೆ ʻವಿವಾದಿತ ರಚನೆʼ ಎಂಬ ಪದವನ್ನು ಬಳಸಲು ನ್ಯಾಯಾಲಯದ ಸ್ಟೆನೋಗ್ರಾಫರ್‌ಗೆ ಸೂಚಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಇದನ್ನೂ ಓದಿ: I Love You ಅನ್ನೋದ್ರಲ್ಲಿ ಲೈಂಗಿಕ ಉದ್ದೇಶವಿಲ್ಲ – ಬಾಂಬೆ ಹೈಕೋರ್ಟ್‌

ಆದಾಗ್ಯೂ, ಮುಸ್ಲಿಂ ಕಡೆಯವರು ಈ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿರುವುದು ಮುಸ್ಲಿಂ ಕಡೆಯವರಿಗೆ ದೊಡ್ಡ ಪರಿಹಾರವಾಗಿದೆ. ಈ ನಡುವೆ ಹಿಂದೂ ಕಡೆಯಿಂದ ಸಲ್ಲಿಸಲಾದ 18 ಅರ್ಜಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಈ ಪ್ರಕರಣವನ್ನು ಪ್ರಸ್ತುತ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ

Share This Article