ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

Public TV
2 Min Read

ಬೆಂಗಳೂರು: ಕೆಪಿಎಸ್‌ಸಿ (KPSC) ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ. ನೇಮಕಾತಿ ಪಟ್ಟಿಯೇ ನಾಪತ್ತೆ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್‌ ಸರ್ಕಾರದ (Congress Government) ವಿರುದ್ಧ ಬಿಜೆಪಿ (BJP) ಕಿಡಿಕಾರಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಬಿಜೆಪಿ, ಕಲೆಕ್ಷನ್‌, ಕಮಿಷನ್‌, ಟ್ರಾನ್ಸ್‌ಫರ್‌ ದಂಧೆ ನಡೆಸುತ್ತಿರುವ ಮಜಾವಾದಿ ಸಿದ್ದರಾಮಯ್ಯ (Siddaramaiah) ಸರ್ಕಾರ, ಇದೀಗ ಕೆಪಿಎಸ್‌ಸಿ ನೇಮಕಾತಿಯಲ್ಲೂ ಅಕ್ರಮ ನಡೆಸಿದೆ. ಈ ಅಕ್ರಮ ಬಯಲಿಗೆ ಬರಬಾರದು ಎಂದು ನೇಮಕಾತಿ ಪಟ್ಟಿಯನ್ನೇ ಕಳ್ಳತನ ಮಾಡಿ ನಾಪತ್ತೆ ಆಗಿದೆ ಎಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದೆ ಎಂದು ಆರೋಪಿಸಿದೆ.

ಮಜಾವಾದಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರಿ ಕಡತಗಳು ಸುಟ್ಟು ಹೋಗುವುದು, ನಾಪತ್ತೆ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ಕಡತಗಳು ದೊರೆತರೇ ಮಾತ್ರ ಕಳ್ಳರು ಸಿಕ್ಕು ಬೀಳುತ್ತಾರೆ. ಕಡತವೇ ಇಲ್ಲ ಎಂದರೆ, ಕಳ್ಳರು ರಾಜಾರೋಷವಾಗಿ ಓಡಾಡಬಹುದು ಎನ್ನುವುದೇ ಸ್ಲೀಪಿಂಗ್ ಸರ್ಕಾರ ದ ಮೂಲ ಮಂತ್ರ ಎಂದು ಹೇಳಿದೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10ರ ಬಾಲಕಿ ಸಾವು

ಏನಿದು ನೇಮಕಾತಿ ಪಟ್ಟಿ ನಾಪತ್ತೆ ಕೇಸ್?‌
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ 2016ರ ಸೆಪ್ಟೆಂಬರ್‌ 24ರಂದು ಪರೀಕ್ಷೆ ನಡೆದಿತ್ತು. ಅದರ ನೇಮಕಾತಿಗೆ ಸಂಬಂಧಿಸಿದ ಕಡತ ಈಗ ನಾಪತ್ತೆಯಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಕಚೇರಿಯಲ್ಲಿದ್ದ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಆಯ್ಕೆ ಪಟ್ಟಿ ನಾಪತ್ತೆಯಾಗಿದೆ ಎಂದು ಆಯೋಗದ ಸಹಾಯಕ ಕಾರ್ಯದರ್ಶಿ ಜೆ.ರಾಘವೇಂದ್ರ ಅವರು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 22ರಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಅವಧಿ ಮೀರಿ ಪಾರ್ಟಿ ಕೇಸ್ – ನಟ ದರ್ಶನ್ ಸೇರಿ 8 ಮಂದಿಗೆ ರಿಲೀಫ್

 

2018ರ ನವೆಂಬರ್‌ 22ರಂದು ಪ್ರಕಟಿಸಲಾದ ಹೆಚ್ಚುವರಿ ಆಯ್ಕೆಪಟ್ಟಿ ಸಂಬಂಧ ಎಚ್‌.ಡಿ. ವಿವೇಕಾನಂದ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದಂತೆ ಕೆಪಿಎಸ್​ಸಿ ಗೋಪ್ಯ ಶಾಖೆ–3ರಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ಧಮಾಡಲಾಗಿತ್ತು. ಈ ವರ್ಷದ ಜನವರಿ 22ರಂದು ಕಾರ್ಯದರ್ಶಿಯವರ ಆ‍ಪ್ತ ಶಾಖೆಯಲ್ಲಿ ಕಡತವನ್ನು ಸ್ವೀಕರಿಸಲಾಗಿತ್ತು. ಆ ಬಳಿಕ ಕಡತ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾಪತ್ತೆಯಾದ ಬಳಿಕ ಕೆಪಿಎಸ್‌ಸಿಯ‌ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2 ಕ್ಕೆ‌ ಹಿಂದಿರುಗಿಸುವಂತೆ ಕೆಪಿಎಸ್‌ಸಿ ಜ್ಞಾಪನ ಹೊರಡಿಸಿತ್ತು. ಸುಮಾರು ಒಂದು ತಿಂಗಳು ಶೋಧ ನಡೆಸಿದರೂ ಕಡತ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share This Article