ಸಬ್ ಇನ್ಸ್‌ಪೆಕ್ಟರ್ ಆದ್ರೂ ನಿಲ್ಲದ ಓದುವ ಹಂಬಲ – ಕನಸು ನನಸಾಯ್ತು

Public TV
1 Min Read

ಹುಬ್ಬಳ್ಳಿ/ಧಾರವಾಡ: ಸಾಧಿಸುವ ಛಲವಿದ್ದರೇ ಎನ್ನಾದ್ರು ಸಾಧಿಸಬಹುದು. ಸಾಕಷ್ಟು ಕೆಲಸದ ಮಧ್ಯೆಯೂ ಓದಲು ಸಮಯವಿಲ್ಲದಿದ್ದರೂ ನಿದ್ದೆಗೆಟ್ಟು ಹಗಲು ರಾತ್ರಿ ಎನ್ನದೇ ಓದಿದ ಸಬ್ ಇನ್ಸ್‌ಪೆಕ್ಟರ್ ರೊಬ್ಬರು ಇದೀಗ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.

ಧಾರವಾಡದ ಆಂತರಿಕ ಭದ್ರತಾ ವಿಭಾಗದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಮಂಜುನಾಥ್ ಬೆಣಗಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಬಡತನ, ಅಂಗವೈಕಲ್ಯ ಮೆಟ್ಟಿನಿಂತು ಕೆಎಎಸ್ ಪರೀಕ್ಷೆಯಲ್ಲಿ ಪಾಸ್

 

ಕೆಪಿಎಸ್ ಸಿ ಯಲ್ಲಿ ಮೂರು ಬಾರಿ ಪರೀಕ್ಷೆ ಬರೆದಿದ್ದ ಎಸ್ ಐ. ಮಂಜುನಾಥ್ ಬೆಣಗಿ 2015ರಲ್ಲಿ ಮೇನ್ಸ್ ಪರೀಕ್ಷೆ ಪಾಸಾಗಿದ್ದರು. ಆದರೆ ಸಂದರ್ಶನದಲ್ಲಿ ಕಡಿಮೆ ಅಂಕ ಬಂದಿದ್ದ ಪರಿಣಾಮ ಮತ್ತೊಮ್ಮೆ ಪರೀಕ್ಷೆ ಬರೆದಿದ್ದ ಮಂಜುನಾಥ್ ಬೆಣಗಿ ಈ ಬಾರಿ ಯಶಸ್ಸು ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಪಾಸ್ – ಕೂಲಿ ಮಾಡಿ ಓದಿಸಿದ್ದ ತಾಯಿಗೆ ಮಗನ ಗಿಫ್ಟ್

ಮಂಜುನಾಥ್ ಬೆಣಗಿ ತಂದೆ ಧರ್ಮರಾಜ್ ಚಪ್ಪಲಿ ಅಂಗಡಿ ಇಟ್ಟುಕೊಂಡು ಬಡತನದಲ್ಲೆ ಮಕ್ಕಳನ್ನ ಓದಿಸಬೇಕು, ಅವರನ್ನು ಉನ್ನತ ಹುದ್ದೆಯಲ್ಲಿ ನೋಡಬೇಕು ಎಂದು ಕಷ್ಟಪಟ್ಟಿದ್ದರು. ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದ, ಮಂಜುನಾಥ್ ಮೊದಲು ಎಸ್ ಐ ಆಗಿ ನೇಮಕಗೊಂಡು ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ:  ಚಿಕ್ಕಬಳ್ಳಾಪುರ ಜಿಲ್ಲೆಯ 12 ಮಂದಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆ

ಕೆಎಎಸ್ ಮಾಡಬೇಕು ಎಂದು ಕನಸು ಕಂಡಿದ್ದ ಮಂಜುನಾಥ್ ತಮ್ಮ ಇಷ್ಟದಂತೆ ಇದೀಗ ಕೆಪಿಎಸ್ ಸಿ ಪರೀಕ್ಷೆ ಪಾಸಾಗಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇವರ ಪತ್ನಿಯಾಗಿರುವ ಮಹಾದೇವಿಯವರು ಸಹ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *