ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

Public TV
2 Min Read

ಬೆಂಗಳೂರು: ನನಗೂ, ಕೈ ನಾಯಕರ ಆರೋಪಕ್ಕೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧದ ಪರ್ಸಂಟೇಜ್ ಆರೋಪ ಸಂಬಂಧ ಮಾತನಾಡಿದ ಡಿಕೆಶಿ, ಬೆಳಗ್ಗೆಯಿಂದ ಕೆಲವು ವಿಚಾರಗಳ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಕೆಲವು ಆಂತರಿಕವಾದ ಸಂಭಾಷಣೆಗಳು ನಡೆದವು ಎಂಬುದನ್ನು ತೋರಿಸಿದ್ದೀರಿ ಎಂದು ಆರಂಭಿಸಿದರು.

ಪಕ್ಷ ಶಿಸ್ತನ್ನು ಬಹಳ ಗಮನದಲ್ಲಿಟ್ಟುಕೊಂಡು ಶಿಸ್ತು ಪಾಲನಾ ಕಮಿಟಿ ಏನು  ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಕೈ ನಾಯಕರು ಹೇಳಿರುವ ವಿಚಾರದ ಕುರಿತು ನನಗೂ, ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲದೇ ಇರುವಂತಹ ವಿಚಾರವಾಗಿದೆ. ಈಗಾಗಲೇ ಉಗ್ರಪ್ಪನವರು ಪ್ರೆಸ್ ಮೀಟ್ ಏನು ಹೇಳಬೇಕೋ ಹೇಳಿದ್ದಾರೆ. ಅವರೇ ನಿಮಗೆ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

ಇದೇ ವೇಳೆ ಮಾಧ್ಯಮದ ಮೇಲೆ ಗೂಬೆ ಕೂರಿಸಿದ ಉಗ್ರಪ್ಪ ಅವರ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಮೀಡಿಯಾ ತಪ್ಪು ಅಂತ ಯಾಕೆ ಹೇಳಿ. ನಾವು ಮಾತಾಡಿದ್ದನ್ನು ನೀವು ತೋರಿಸಿದ್ದೀರಿ. ಈ ಹಿಂದೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಮಾತಾಡಿದ್ರು, ತೋರಿಸಿದ್ದೀರಿ. ಇದೀಗ ಇವರು ಮಾತಾಡಿದ್ದಾರೆ ನೀವು ತೋರಿಸಿದ್ದೀರಿ. ಆದರೆ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ಉಗ್ರಪ್ಪ ದೂರು ನೀಡಲಿ: ಆರಗ ಜ್ಞಾನೇಂದ್ರ

ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ, ಮೊಟ್ಟೆ ಎಸೆಯುವವರು ಹೀಗೆ ಹಲವು ರೀತಿಯ ಜನ ಇದ್ದಾರೆ. ಯಾವ ಜಗಳನೂ ಇಲ್ಲ. ನಿಮ್ಮ ಆಪ್ತ ಸಲೀಂ ಹೇಳಿರುವುದು ಎಷ್ಟು ಸರಿ. ಇಂಟರ್ನಲ್ ಚರ್ಚೆಯಾಗಿದೆ ಹೊರತು ಬಹಿರಂಗ ಹೇಳಿಕೆ ನೀಡಿಲ್ಲ. ಪರ್ಸೆಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಗೃಹ ಸಚಿವರು ದೂರು ನೀಡಲು ಹೇಳಿದ್ದಾರೆ ಅಂತೆ. ಅವರೇ ಸುಮೊಟೋ ಕೇಸ್ ದಾಖಲಿಸಿಕೊಂಡರೆ ಒಳ್ಳೆಯದು ಎಂದು ತಿಳಿಸಿದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

Share This Article
Leave a Comment

Leave a Reply

Your email address will not be published. Required fields are marked *