ಬೆಂಗಳೂರು: ಕೆಪಿಸಿಸಿ ಪಟ್ಟದ ನಿರೀಕ್ಷೆಯಲ್ಲಿದ್ದ ಟ್ರಬಲ್ ಶೂಟರ್, ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಇಂದಿನಿಂದ ಹೊಸ ತಲೆನೋವು ಎದುರಾಗಿದೆ. ಪಕ್ಷದೊಳಗಿನ ಆಂತರಿಕ ಶತ್ರುಗಳೆಲ್ಲಾ ಒಟ್ಟಾಗಿ ಮಾಡಿರುವ ಯತ್ನ ವಿಫಲವಾಗುತ್ತಾ? ಸಫಲವಾಗುತ್ತಾ? ಅನ್ನೋದೆ ಡಿಕೆ ಶಿವಕುಮಾರ್ ಟೆನ್ಷನ್. ದೆಹಲಿ ಅಂಗಳದಲ್ಲಿ ಡಿ.ಕೆ.ಶಿವಕುಮಾರ್ ಪಾಲಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ಹೋಗುತ್ತಿದ್ದಾರೆ. ನಾಳೆ ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಯನ್ನ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗರು ಸಹ ಸಿದ್ದರಾಮಯ್ಯ ಪರವಾಗಿ ದೆಹಲಿಯಲ್ಲಿ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಅತ್ತ ರಾಹುಲ್ ಗಾಂಧಿ ಸಹ ಸಿದ್ದರಾಮಯ್ಯ ವಿಷಯದಲ್ಲಿ ಸಾಫ್ಟ್ ಕಾರ್ನರ್ ಹೊಂದಿದ್ದು. ಸಿದ್ದರಾಮಯ್ಯ ಪರವಾಗಿ ಸೋನಿಯಗಾಂಧಿ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದು ಕಡೆ ಪರಮಮೇಶ್ವರ್ ವರದಿಯಲ್ಲೂ ಸಹ ಡಿಕೆಶಿ ಪಟ್ಟಾಭಿಷೇಕಕ್ಕೆ ಇರುವ ಅಡ್ಡಿ ಆತಂಕಗಳ ಪ್ರಸ್ತಾಪವಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೆರಡು ದಿನದಲ್ಲಿ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕ, ಸಿಎಲ್ ಪಿ ನಾಯಕ ಎಲ್ಲ ಸ್ಥಾನಗಳ ಆಯ್ಕೆಯು ಪ್ರಕಟವಾಗಲಿದೆ. ಆದರೆ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಪಟ್ಟಾಭಿಷೇಕ ತಪ್ಪಿಸಲು ಸಿದ್ದರಾಮಯ್ಯ ಅಂಡ್ ಟೀಂ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಭವಿಷ್ಯ ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಕೈ ನಾಯಕರ ಲಾಬಿಯ ಮೇಲೆ ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ.