– ದೇವೇಗೌಡರಿಂದಲೇ ಕಾಂಗ್ರೆಸ್ ಮುಕ್ತ ಆಗಲಿದೆ
ಉಡುಪಿ: ಕಾಂಗ್ರೆಸ್ ಪಕ್ಷಕ್ಕೆ ಧೃತರಾಷ್ಟ್ರಾಲಿಂಗನ ಆಗಿದೆ ಪರಿಷತ್ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ದೇವೇಗೌಡ- ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ವಿಚಾರಕ್ಕೆ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶತಮಾನದ ಇತಿಹಾಸವನ್ನು ಹೊಂದಿದ್ದು, ಈಗ ಜೆಡಿಎಸ್ ಜೊತೆ ದೇವೇಗೌಡ ಎಂಬ ಧೃತರಾಷ್ಟ್ರನ ಆಲಿಂಗನವಾಗಿದೆ. ಇದರಿಂದ ಕಾಂಗ್ರೆಸ್ ಸಂಪೂರ್ಣ ಸರ್ವನಾಶ ಆಗಲಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಮಾಡುವ ಅವಕಾಶ ಬಿಜೆಪಿಗೆ ಇಲ್ಲ. ದೇವೇಗೌಡರೇ ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ ಲೇವಡಿ ಮಾಡಿದ್ದಾರೆ.
ಉಪಚುನಾವಣೆ ಘೋಷಣೆಯಾದ ನಂತರ ಮಂತ್ರಿಗಳಿಲ್ಲದೇ ವಿಧಾನಸೌಧ ಖಾಲಿಯಾಗಿದೆ. ಯಾವ ಜಿಲ್ಲೆಗೂ ಉಸ್ತುವಾರಿ ಮಂತ್ರಿಗಳು ಭೇಟಿಕೊಡುತ್ತಿಲ್ಲ. ಮಂತ್ರಿಮಂಡಲದ ಅಧಿಕಾರವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಾಂಗ್ರೆಸ್ ಗೂಂಡಾಗಳು ನುಗ್ಗಿದ್ದಾರೆ, ಆದರೆ ಇನ್ನೂ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಅದ್ದರಿಂದ ಬೆಳಗಾವಿಗೆ ಈ ಕುರಿತು ಚರ್ಚೆ ಮಾಡಲು ತೆರಳುತ್ತೇನೆ ಎಂದು ತಿಳಿಸಿದರು.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರ ಮನೆಗೂ ಕಾಂಗ್ರೆಸ್ ಗೂಂಡಾಗಳು ಮುತ್ತಿಗೆ ಹಾಕಲು ಮುಂದಾಗಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದು ಇದರಲ್ಲೇ ತಿಳಿಯುತ್ತದೆ. ಆದರೆ ರಾಜ್ಯದಲ್ಲಿ 5 ಕಡೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಮೂರು ಕಡೆ ಅನಾಯಾಸವಾಗಿ ಗೆಲ್ಲಲಿದೆ. ಮಂಡ್ಯ ರಾಮನಗರದಲ್ಲಿ ಬಿಜೆಪಿಗೆ ಶಕ್ತಿ ಬಂದಿದ್ದು, ಮೈತ್ರಿ ರಾಜಕರಣ ಅಲ್ಲಿ ವರ್ಕೌಟಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv