ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ

Public TV
1 Min Read

ಮಡಿಕೇರಿ: ಎಷ್ಟೋ ಹಿಂದೂ ದೇವಾಲಯಗಳಲ್ಲಿ ಎಣ್ಣೆ – ಬತ್ತಿಗೂ ಹಣವಿಲ್ಲ. ದೇವಾಲಯಗಳನ್ನು ಭಕ್ತರ ಕೈಗೆ ಕೊಡುವುದರಲ್ಲಿ ತಪ್ಪೇನಿಲ್ಲ. ದೇವಸ್ಥಾನಗಳನ್ನು ಸ್ವತಂತ್ರಗೊಳಿಸಿದರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೊಡಗಿನ ಪಾಲಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಾಲಯಗಳ ಆಸ್ತಿಯನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ, ಸರ್ಕಾರದ ಹಿಡಿತದಿಂದ ಸ್ವಾತಂತ್ರಗೊಳಿಸಲಾಗುತ್ತಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು. ಹಿಂದೂ ದೇವಾಲಯಗಳನ್ನು ಸ್ವಾತಂತ್ರಗೊಳಿಸಿ ಎಂದು ಸಿದ್ದರಾಮಯ್ಯನವರು ಕೇಳಬೇಕಿತ್ತು. ಆದರೆ ಅವರು ಯಾಕೆ ವಿರೋಧ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಮಸೀದಿ ಹಾಗೂ ಚರ್ಚ್ಗಳು ಆಯಾ ಸಮುದಾಯಗಳ ಆಡಳಿತದಲ್ಲಿದೆ. ಆದರೆ ಹಿಂದೂ ದೇವಾಲಯಗಳು ಸರ್ಕಾರದ ಆಡಳಿತದಲ್ಲಿದೆ ಎಂದರು. ಇದನ್ನೂ ಓದಿ: ಪಾದಯಾತ್ರೆ ಕಾಂಗ್ರೆಸ್ಸಿನ ಅತ್ಯಂತ ಹೀನಾಯ ರಾಜಕಾರಣ: ಕಟೀಲ್

ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಾಗ, ಆರ್ಥಿಕ ಅಪರಾಧಗಳಾದಾಗ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಕಾಂಗ್ರೆಸ್‌ನವರು ಈ ವಿಚಾರದಲ್ಲಿ ಯಾಕೆ ಭಯಗೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಾಕ್‌ಡೌನ್ ಬಗ್ಗೆ ಮಾಹಿತಿ ನೀಡಿದ ಶ್ರೀನಿವಾಸ ಪೂಜಾರಿ, ಕೊಡಗು ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ದರ ಶೇ.೧ ಇದೆ. ಅದು ಶೇ.೫ ರಷ್ಟು ಆದರೆ ಲಾಕ್‌ಡೌನ್ ಮಾಡುವುದು ಅನಿವಾರ್ಯವಾಗುತ್ತದೆ. ಅಂತಹ ಸ್ಥಿತಿಗೆ ಜನರು ಅವಕಾಶ ಕೊಡಬಾರದು. ರಾಜ್ಯದ ಕೆಲವು ಕಡೆಗಳಲ್ಲಿ ಪಾಸಿಟಿವಿಟಿ ದರ ಶೇ.೧ ಕ್ಕಿಂತ ಜಾಸ್ತಿ ಇದೆ. ಅದು ಇನ್ನಷ್ಟು ಜಾಸ್ತಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‍ಡೌನ್ ಮಾಡೋ ಉದ್ದೇಶ ಸರ್ಕಾರಕ್ಕೆ ಇಲ್ಲ: ಬಿ.ಸಿ ಪಾಟೀಲ್

Share This Article
Leave a Comment

Leave a Reply

Your email address will not be published. Required fields are marked *