ಕೋರಮಂಗಲ ಅಪಘಾತ – 7 ಮಂದಿಯ ಸಾವಿಗೆ ಮದ್ಯ ಪಾರ್ಟಿಯೇ ಕಾರಣ

Public TV
2 Min Read

– ಏಳು ಜನ ಸಾವನ್ನಪ್ಪಿದ ಪ್ರಕರಣಕ್ಕೀಗ ಸಿಕ್ಕಿದೆ ಸಂಪೂರ್ಣ ಸಾಕ್ಷ್ಯ
– ಎಲ್ಲಿ ಪಾರ್ಟಿ ಮಾಡಿದ್ರು, ಯಾರನ್ನು ಭೇಟಿ ಮಾಡಿದ್ರು ಎಲ್ಲವೂ ಬಹಿರಂಗ

ಬೆಂಗಳೂರು: ಕೋರಮಂಗಲ ಕಾರು ಅಪಘಾತಕ್ಕೆ ಇದೀಗ ಬಹುತೇಕ ಎಲ್ಲ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ಹೊಸೂರು ಶಾಸಕನ ಪುತ್ರನ ಕರುಣಾಸಾಗರ್ ಕಾರು ಚಲಾಯಿಸುತ್ತಿದ್ದಾಗ ಮದ್ಯಪಾನ ಮಾಡಿದ್ದ ಎಂಬುದು ಬಹಿರಂಗವಾಗಿದೆ.

ಕೋರಮಂಗಲದಲ್ಲಿ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಕರುಣಾಸಾಗರ್ ಸೇರಿ ಏಳು ಜನ ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಸಂಪೂರ್ಣ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಗಾಡಿ ಓಡಿಸಿ ಸಾವನ್ನಪ್ಪಿದವರು ಎಲ್ಲೆಲ್ಲಿ ಹೋಗಿದ್ದರು? ಎಲ್ಲಿ ಪಾರ್ಟಿ ಮಾಡಿದ್ದರು? ಯಾರನ್ನು ಭೇಟಿ ಮಾಡಿದ್ದರು ಎಂಬುದು ಬಹಿರಂಗವಾಗಿದೆ. ಇದನ್ನೂ ಓದಿ: ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು

ಗಾಡಿ ಓಡಿಸುತ್ತಿದ್ದ ಶಾಸಕರ ಪುತ್ರ ಕರುಣಾಸಾಗರ್ ಮದ್ಯಪಾನ ಮಾಡಿದ್ದ. ಕರುಣಾಸಾಗರ್ ಜೊತೆಯಲ್ಲಿ ಇನ್ನಿಬ್ಬರು ಕೂಡ ಚೆನ್ನಾಗಿ ಕುಡಿದಿದ್ದರು ಎಂಬುದು ಸಾಬೀತಾಗಿದೆ. ಕರುಣಾಸಾಗರ್ ಮತ್ತು ಆತನ ಸ್ನೇಹಿತರು ಸಹ ಪಾರ್ಟಿ ಮಾಡಿರುವುದು ಸ್ಪಷ್ಟವಾಗಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ :ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

ಕರುಣಾಸಾಗರ್ ಸ್ನೇಹಿತೆಯರು ಕೋರಮಂಗಲದ ಪಿಜಿ ಬಳಿಯಲ್ಲಿರುವ ಅಂಗಡಿಯಿಂದ ಮದ್ಯ ಖರೀದಿ ಮಾಡಿದ್ದರು. ಬಳಿಕ ರಾತ್ರಿ 8:45ಕ್ಕೆ ಮದ್ಯವನ್ನು ಪಿಜಿಗೆ ತೆಗೆದುಕೊಂಡು ಹೋಗಿದ್ದಾರೆ. 8:45 ರಿಂದ 11:45ರ ತನಕ ಪಿಜಿಯಲ್ಲಿಯೇ ಪಾರ್ಟಿ ಮಾಡಿದ್ದಾರೆ. ಬಳಿಕ ರೌಂಡ್ಸ್ ಗಾಗಿ ಕರುಣಾಸಾಗರ್ ಗ್ಯಾಂಗ್ ಹೊರಗೆ ಹೊರಟಿದೆ. ಈ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದೆ. ಪೊಲೀಸರು ಕಾರನ್ನು ತಡೆದು ಪ್ರಶ್ನೆ ಮಾಡಿದಾಗ ಶಾಸಕರ ಮಗ ಎಂದು ಪೊಲೀಸರಿಗೆ ಹೇಳಿ ಹೊರಟಿದ್ದಾನೆ. ಬಳಿಕ ಕರುಣಾಸಾಗರ್ ತಮ್ಮ ಗ್ಯಾಂಗ್ ಜೊತೆ ಸೋನಿ ವಲ್ರ್ಡ್ ಕಡೆಯೆಲ್ಲಾ ಸುತ್ತಾಡಿದ್ದಾನೆ. ಇದನ್ನೂ ಓದಿ: ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು

ರಸ್ತೆಯಲ್ಲಿ ಸುತ್ತಾಡಿದ ಬಳಿಕ ಕರುಣಾಸಾಗರ್ ನ ಮತ್ತೊಬ್ಬ ಸ್ನೇಹಿತನ ಮನೆ ವೆಂಕಟಾಪುರಕ್ಕೆ ತೆರಳಿದ್ದಾರೆ. ಅಲ್ಲಿ ಊಟ ತರಿಸಿಕೊಂಡು ಊಟ ಮಾಡಿದ್ದಾರೆ. ಬಳಿಕ ಶೌಚಾಲಯ ಉಪಯೋಗಿಸಿ ಅಲ್ಲಿಂದ ಹೊರಟ್ಟಿದ್ದಾರೆ. ಬಳಿಕ ರಾತ್ರಿ 1:35ರ ಸುಮಾರಿಗೆ ಸಿಲ್ಕ್ ಬೋರ್ಡ್ ನ ಬಳಿ ಬಂದಿರುವುದು ಪತ್ತೆಯಾಗಿದ್ದು, ಕಾರನ್ನು ವೇಗವಾಗಿ ಓಡಿಸಿಕೊಂಡು ಅಪಘಾತ ಮಾಡಿಕೊಂಡಿದ್ದಾರೆ. ಕರುಣಾಸಾಗರ್ ಕುಡಿದು ಗಾಡಿ ಚಲಾಯಿಸಿರುವುದು ತನಿಖೆಯ ಸಂದರ್ಭದಲ್ಲಿ ಸ್ಪಷ್ಟವಾಗಿದೆ. ಡ್ರಗ್ಸ್ ಸೇವನೆ ಮಾಡಿದ್ದರೋ ಇಲ್ಲವೋ ಎಂಬುದರ ಬಗ್ಗೆ ವರದಿ ಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *