ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

Public TV
1 Min Read

ಮಡಿಕೇರಿ: ಕಳ್ಳರು ಕದಿಯೋದಾದ್ರೆ ಚಿನ್ನಾಭರಣವನ್ನೋ, ನಗದನ್ನೋ ಇಲ್ಲ ಬೆಲೆ ಬಾಳುವ ವಸ್ತುಗಳ ಕದಿಯೋದು ಸರ್ವೆಸಾಮಾನ್ಯ. ಆದರೆ ಇಲ್ಲೊಬ್ಬ ಕೊರಗಜ್ಜ ದೇವರಿಗೆ ಇಟ್ಟ ನೈವೇದ್ಯ ಎರಡು ಪ್ಯಾಕೇಟ್ ಮದ್ಯವನ್ನು ಎಗರಿಸಿದ್ದಾನೆ.

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್‍ನಲ್ಲಿ ಕೊರಗಜ್ಜನ ದೇವಾಲಯವಿದೆ. ಅಲ್ಲಿಗೆ ಬಂದ ಕಳ್ಳನೊಬ್ಬ ದೇವಾಲಯದ ಹೊರಗೆ ನಿಂತು ದೇವಾಲಯದ ಒಳಗೆ ಎಣ್ಣೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿದ್ದಾನೆ. ಯಾರು ಇಲ್ಲದಿರುವುದನ್ನು ಮನಗಂಡಿದ್ದೇ ತಡ ದೇವಾಲಯದ ಒಳಗೆ ಬಂದವನೇ ಎರಡು ಪ್ಯಾಕೇಟ್ ಎಣ್ಣೆಯನ್ನು ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದೆಲ್ಲವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ಫೋಟೋ ವೈರಲ್

ಇನ್ನೊಂದು ವಿಷಯ ಎಂದರೆ ದೇವರ ಮುಂದೆ ಸಾಕಷ್ಟು ಪ್ಯಾಕೇಟ್ ಮದ್ಯ ಇದ್ದರು ಆತ ಎಲ್ಲವನ್ನು ತೆಗೆದುಕೊಂಡು ಹೋಗಿಲ್ಲ. ಬದಲಾಗಿ ತನಗೆ ಅಗತ್ಯವಿದ್ದಷ್ಟು ಎರಡು ಪ್ಯಾಕೇಟ್ ಗಳನ್ನು ಮಾತ್ರ ಕೊಂಡೊಯ್ದು ತನ್ನ ಅಗತ್ಯವನ್ನು ಪೂರೈಸಿಕೊಂಡಿದ್ದಾನೆ. ಎಣ್ಣೆ ಎಗರಿಸಿರುವುದು ಗಮನಕ್ಕೆ ಬಂದ ಕೊರಗಜ್ಜ ದೇವರ ಅರ್ಚಕ ಎಣ್ಣೆ ಕದ್ದವನಿಗೆ ಶಿಕ್ಷೆ ಕೊಡುವಂತೆ ಹರಕೆ ಕಟ್ಟಿದ್ದಾರೆ. ಇದಾದ ಬಳಿಕ ಎಣ್ಣೆ ಕದ್ದವನ ಆರೋಗ್ಯದಲ್ಲಿ ವ್ಯತ್ಯಯವಾಗಿ ಬಳಿಕ ದೇವರಿಗೆ ತಪ್ಪು ಕಾಣಿಕೆ ನೀಡಿದ ಪ್ರಸಂಗ ಕೂಡ ನಡೆದಿದೆ. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಕೊರಗಜ್ಜನ ಮಹಿಮೆ ಅಥವಾ ಪವಾಡ ಹೆಚ್ಚಿದ್ದು, ತಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಮದ್ಯ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುವುದು ವಾಡಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *