ಬೆಂಗಳೂರು: ಕೊಪ್ಪಳದ (Koppal) ಗವಿಸಿದ್ದಪ್ಪ (Gavisiddappa) ಕೊಲೆ ಕೇಸನ್ನು ಎನ್‌ಐಎಗೆ (NIA) ವಹಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಒತ್ತಾಯಿಸಿದರು.
ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಎಮ್ಮೆ ಚರ್ಮದ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅವರ ಮನಸ್ಥಿತಿ ಕೂಡ ಹಾಗೆ ಇದೆ. ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹೆಚ್ಚಾಗಿ ಆಗುತ್ತಿತ್ತು. ಆದರೆ ಈಗ ಅದನ್ನ ಮೀರಿ ಬೀದರ್‌ನಿಂದ ಬೆಂಗಳೂರಿನವರೆಗೂ ವ್ಯಾಪಿಸಿದೆ. ಆ.3ರಂದು ಕೊಪ್ಪಳದಲ್ಲಿ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ನಾಯಕ್ ಎಂಬ ಯುವಕನ ಕೊಲೆ ಆಗಿದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿ ಆತ. ಈತನನ್ನ ಸಾದಿಕ್ ಹಾಗೂ ಐದಾರು ಜನ ಸೇರಿ ಮಸೀದಿಯ ಮುಂಭಾಗ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಆಪರೇಷನ್ ಸಿಂಧೂರಕ್ಕೆ ಜೈಶ್ ನೆಲೆಗಳು ಉಡೀಸ್ – ಪುನರ್ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ
ಇದು ಸುಹಾಸ್ ಶೆಟ್ಟಿ ಮಾದರಿಯ ಕೊಲೆ. ಪೊಲೀಸರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿತ್ತು. ಕೊಲೆಗೂ ಎರಡು ದಿನ ಮುಂಚೆ ಆರೋಪಿ ತಲ್ವಾರ್ ಹಿಡಿದುಕೊಂಡಿದ್ದ. ಆರೋಪಿ ಯಾವಾಗಲೂ ಹೈವೇಯಲ್ಲಿ ವ್ಹೀಲಿಂಗ್ ಮಾಡ್ತಿದ್ದ. ಗಾಂಜಾ ಹೊಡೆಯೋದು, ಹೊಗೆ ಬಿಡೋದು ಮಾಡ್ತಿದ್ದ. ಆದರೂ ಈ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಆಗ್ತಿದೆ. ಬಾನುವನ್ನು ಯಾಕೆ ಪೊಲೀಸರು ಬಂಧನ ಮಾಡಿಲ್ಲ. ಜಿಲ್ಲಾ ಮಂತ್ರಿಗಳು ಈವರೆಗೂ ಹೋಗಿಲ್ಲ ಎಂದು ಆರೋಪಿಸಿದರು.
ಬಳ್ಳಾರಿ ಸಾಕಿದ ನಾಯಿ ಕೊಪ್ಪಳಕ್ಕೆ (Koppal) ಬಂದಿದೆ ಅಂತ ಶ್ರೀರಾಮುಲುಗೆ ಫರೀದ್ ಎಂಬಾತ ಹೇಳಿದ್ದಾನೆ. ಪೊಲೀಸ್ ಇಲಾಖೆ ಕತ್ತೆ ಕಾಯ್ತಿದೆಯಾ? ಬಿಜೆಪಿ ಕಾರ್ಯಕರ್ತರು ಅಂದರೆ ಅವರ ಮೇಲೆ ಕೇಸ್ ಹಾಕ್ತೀರಾ. ಇಂತಹ ವಿಷಯಗಳು ಪೊಲೀಸರಿಗೆ ಕಾಣೋದಿಲ್ಲವಾ? ಪೊಲೀಸ್ ಇಲಾಖೆ, ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.
ಒಲೈಕೆ ರಾಜಕೀಯ ಎಷ್ಟು ದಿನ ಮಾಡ್ತೀರಾ? ವೋಟ್‌ಬ್ಯಾಂಕ್‌ಗಾಗಿ ಮಾಡ್ತಿರೋದು ಜನರ ಪ್ರಾಣ ತೆಗೆದುಕೊಳ್ತಿದೆ. ಇದಕ್ಕಾಗಿ ಬಿಜೆಪಿ ದೊಡ್ಡ ಹೋರಾಟ ಮಾಡುತ್ತದೆ. ಆ.10, 11ರಂದು ಕೊಪ್ಪಳದಲ್ಲಿ ಪ್ರತಿಭಟನೆ ಮಾಡೋ ಚಿಂತನೆ ಆಗಿದೆ. ಸುಹಾಸ್ ಶೆಟ್ಟಿ ಕೇಸ್‌ನಲ್ಲೂ ಇದೆ ಆಗಿದೆ. ಬಿಜೆಪಿ, ಆರ್‌ಎಸ್‌ಎಸ್, ಭಜರಂಗದಳದ ಕಾರ್ಯಕರ್ತರನ್ನ ಹೆದರಿಸೋ ಕೆಲಸ ಸರ್ಕಾರ ಮಾಡ್ತಿತ್ತು. ಎನ್‌ಐಎಗೆ ಕೊಟ್ಟ ಮೇಲೆ ತನಿಖೆ ಆಗ್ತಿದೆ. ಉತ್ತರ ಕರ್ನಾಟಕ ಭಾಗಕ್ಕೆ ಇದು ಹರಡಬಾರದು ಎನ್ನುವುದಾದರೆ ಈ ಕೇಸ್‌ನ್ನು ಎನ್‌ಐಎ ತನಿಖೆಗೆ ಕೊಡಿ ಎಂದರು.
ಸಿಎಂ ಕೂಡಾ ಇವತ್ತು ಕೊಪ್ಪಳಕ್ಕೆ ಹೋಗಬೇಕಿತ್ತು. ಹವಾಮಾನ ಸಮಸ್ಯೆ ಅಂತ ಹೋಗಿಲ್ಲ. ಹವಾಮಾನ ಸರಿಯಾಗಿಯೇ ಇದೆ. ಈ ಕೊಲೆ ಸಂಬಂಧ ಉತ್ತರ ಕೊಡಬೇಕು ಅಂತ ಸಿಎಂ ಅಲ್ಲಿಗೆ ಹೋಗಿಲ್ಲ. ಸಿಎಂ ಪಲಾಯನವಾದ ಮಾಡೋ ಕೆಲಸ ಮಾಡಬಾರದು. ಈ ಕೇಸ್‌ನ್ನು ಎನ್‌ಐಎಗೆ ಕೊಡಬೇಕು. ಆ ಕುಟುಂಬಕ್ಕೆ ಪೊಲೀಸ್ ಭದ್ರತೆ ಕೊಡಬೇಕು. ಪರಿಹಾರ ಕೊಡಬೇಕು. ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮವಾಗಿದೆ – ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡ್ತಾರೆ: ಸಚಿವ ಸುಧಾಕರ್