ಗವಿಮಠ ಜಾತ್ರೆಯಲ್ಲಿ ರಾಜಕೀಯ ಮೇಲಾಟ

Public TV
2 Min Read

ಕೊಪ್ಪಳ: ಅದು ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರುವಾಸಿಯಾದ ಜಾತ್ರೆಯಾಗಿದ್ದು, ಆ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಜಾತ್ರೆಯ ಮಾಹಾ ದಾಸೋಹ ಮತ್ತೊಂದು ವೈಶಿಷ್ಟ್ಯ. ಆದರೆ ಈ ಬಾರಿ ಆ ಜಾತ್ರೆಗೆ ಪೊಲಿಟೀಕಲ್ ಟಚ್ ಕೊಡಲಾಗುತ್ತಿದೆ. ಕಾಂಗ್ರೆಸ್ ಬಿಜೆಪಿ ನಾಯಕರು ಜಾತ್ರೆಯನ್ನು ರಾಜಕೀಯ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಪ್ಪಳದಲ್ಲಿ ಇಂದು ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರುವಾಸಿಯದ ಗವಿ ಸಿದ್ದೇಶ್ವರ ಜಾತ್ರೆ ನಡೆಯಲಿದೆ. ಈ ಜಾತ್ರೆ ಇಷ್ಟು ದಿನ ದಾಸೋಹಕ್ಕೆ, ವಿವಿಧ ಸಾಮಾಜಿಕ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿತ್ತು. ಆದರೆ ಇದೇ ಮೊದಲ ಬಾರಿ ಗವಿ ಸಿದ್ದೇಶ್ವರ ಜಾತ್ರೆ ರಾಜಕೀಯಕ್ಕೆ ಬಳಕೆಯಾಗ್ತಿದೆ.

ಈ ಬಾರಿ ಜಾತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಆಗಮಿಸುತ್ತಿದ್ದಾರೆ. ಹೇಳಿ ಕೇಳಿ ಗವಿ ಮಠದ ಜಾತ್ರೆಗೆ ಲಕ್ಷಾಂತರ ಜನ ಆಗಮಿಸಲಿದ್ದಾರೆ. ಹೀಗಾಗಿ ಸ್ಥಳೀಯ ರಾಜಕೀಯ ಮುಖಂಡರು ಜಾತ್ರೆಯನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್, ಅಹಮ್ಮದ್, ಸತೀಶ್ ಜಾರಕಿಹೊಳಿ ಹಾಗೂ ವಿ.ಎಸ್ ಉಗ್ರಪ್ಪ ಇಂದು ಜಾತ್ರೆಗೆ ಆಗಮಿಸಲಿದ್ದಾರೆ.  ಈ ಬಾರಿ ಜಾತ್ರೆಗೆ ರಾಜಕೀಯ ನಾಯಕರು ಬರುತ್ತಿರೋದು ಗವಿ ಸಿದ್ದೇಶ್ವರ ಜಾತ್ರೋತ್ಸವಕ್ಕೆ ಪೊಲಿಟಿಕಲ್ ಟಚ್ ಸಿಕ್ಕಿದೆ.

ಯಾವಾಗ ಸಿದ್ದರಾಮಯ್ಯ ಜಾತ್ರೆಗೆ ಬರುತ್ತಾರೆ ಅನ್ನೋದು ಕನ್ಫರ್ಮ್ ಆಯ್ತೋ ಆಗಲೇ ಬಿಜೆಪಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಕರೆತರೋ ಪ್ರಯತ್ನ ಮಾಡಿದ್ರು. ಆದರೆ ಯಡಿಯೂರಪ್ಪ ಆಗಮನ ಕೊನೆ ಕ್ಷಣದಲ್ಲಿ ರದ್ದಾದ ಹಿನ್ನೆಲೆ ಬಿಜೆಪಿ ನಾಯಕರು ಸುಮ್ಮನಾಗಲಿಲ್ಲ. ಸದ್ಯ ಬಿಜೆಪಿಯಲ್ಲಿ ಮುನ್ನೆಲೆಗೆ ಬಂದ ಯಡಿಯೂರಪ್ಪ ಪುತ್ರ ವಿಜೇಯಂದ್ರರನ್ನ ಜಾತ್ರೆಗೆ ಕರೆತರುತ್ತಿದ್ದಾರೆ. ಎರಡು ಪಕ್ಷದ ಮುಖಂಡರು ಗವಿ ಸಿದ್ದೇಶ್ವರ ಜಾತ್ರೆಯ ಹೆಸರಲ್ಲಿ ರಾಜಕಾರಣ ಮಾಡುತ್ತಿರೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್.

ಲಕ್ಷ ಲಕ್ಷ ಆಗಮಿಸೋ ಜಾತ್ರೆಯಲ್ಲಿ ರಾಜಕೀಯ ನಾಯಕರಿಂದ ಮುಂದಿನ ಚುನಾವಣೆಗೆ ಕೊಪ್ಪಳ ಬಿಜೆಪಿ, ಕಾಂಗ್ರೆಸ್ ನಾಯಕರು ಈವಾಗಿನಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅತ್ತ ಕಾಂಗ್ರೆಸ್ಸಿನಿಂದ ಐದು ಜನ ಆಗಮಿಸಿದ್ರೆ, ಇತ್ತ ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಟಿ ರವಿ ಹಾಗೂ ವಿಜೇಯಂದ್ರ ಆಗಮಿಸುತ್ತಿದ್ದಾರೆ.

ಒಟ್ಟಾರೆ ಗವಿ ಮಠದ ಜಾತ್ರೆ ತನ್ನದೇ ಆದ ಪರಂಪರೆ ಹೊಂದಿತ್ತು. ಗವಿ ಮಠದ ಜಾತ್ರೆಯ ಸಾಮಾಜಿಕ ಕಾರ್ಯಕ್ರಮ ನಾಡಿನಾದ್ಯಂತ ಮೆಚ್ಚುಗೆ ಗಳಸಿತ್ತು. ಆದರೆ ಮೊದಲ ಬಾರಿಗೆ ರಾಜಕೀಯ ನಾಯಕರು ತಮ್ಕ ಸ್ವಾರ್ಥಕ್ಕೆ ಗವಿ ಮಠವನ್ನೂ ಬಿಡುತ್ತಿಲ್ಲ. ಚುನಾವಣೆ ಸಮದಯಲ್ಲಿ ಅಮಿತ್ ಶಾ, ರಾಹುಲ್ ಗಾಂಧಿ ಗವಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ರು. ಆದರೆ ಜಾತ್ರೆಗೆ ಆಹ್ವಾನವಿಲ್ಲದಿದ್ದರೂ ಸಿದ್ದರಾಮಯ್ಯ, ವಿಜಯೇಂದ್ರ ಬರುತ್ತಿರೋದು ರಾಜಕಾರಣ ಮಾಡೋದಕ್ಕೆ ಅನ್ನೋ ಮಾತುಗಳು ಜಿಲ್ಲೆಯಾದ್ಯಂತ ಹರಿದಾಡ್ತಿವೆ.

Share This Article
Leave a Comment

Leave a Reply

Your email address will not be published. Required fields are marked *