ಅಕ್ರಮ ವೇಶ್ಯಾವಾಟಿಕೆಗೆ ಕುಮ್ಮಕ್ಕು – ಸಿಪಿಐ ಉದಯರವಿ ವಿರುದ್ಧ ಗೃಹ ಸಚಿವರಿಗೆ ದೂರು

Public TV
2 Min Read

ಕೊಪ್ಪಳ: ಜಿಲ್ಲೆಯ ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಉದಯರವಿ ಜಿಲ್ಲೆಯಲ್ಲಿ ಹತ್ತಾರು ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ತಕ್ಷಣವೇ ಅವರ ವಿರುದ್ಧ ಕ್ರಮ ತೆಗೆದುಕೊಂಡು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ದೂರು ನೀಡಿದ್ದಾರೆ.

ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮುನಿರಾಬಾದ್ ಐಆರ್‌ಬಿಗೆ ಆಗಮಿಸಿದ ವೇಳೆ ಸಿಪಿಐ ಉದಯರವಿ ಅಕ್ರಮ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಸ್ವತಃ ಶಾಸಕರ ಲೆಟರ್ ಹೆಡ್‌ ನಕಲಿ ಮಾಡಿಕೊಂಡು, ನಕಲಿ ಸಹಿ ಮಾಡಿ ಇದೇ ಜಿಲ್ಲೆಯಲ್ಲಿ ಮುಂದುವರೆದಿದ್ದಾರೆ ಎಂದು ಸ್ಥಳೀಯ ಶಾಸಕರು ದೂರು ನೀಡಿದ್ದಾರೆ ಎನ್ನಲಾಗಿದೆ. ಮೂರು ಪುಟಗಳ ದೂರಿನಲ್ಲಿ ಗಂಭೀರ ಆರೋಪ ಮಾಡಿರುವ ಶಾಸಕರ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು, ಸಿಪಿಐ ಉದಯರವಿ ಸುಮಾರು ವರ್ಷಗಳಿಂದ ಗಂಗಾವತಿ ತಾಲೂಕಿನಲ್ಲಿ ಪೊಲೀಸ್ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಕಾನೂನು ಸುವ್ಯವಸ್ಥೆಯಡಿಯಲ್ಲಿ ಸುಮಾರು ಅಕ್ರಮ ಚಟುವಟಿಕೆಗಳನ್ನು ಮಾಡಿಸುತ್ತಾ ಮತ್ತು ಇದರಲ್ಲಿ ಪಾಲುದಾರರಾಗಿ ಇರುವುದು ಸ್ಪಷ್ಟವಾಗಿದೆ ಎಂಬ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

ಗಂಗಾವತಿ ತಾಲೂಕಿನ ವಾನಭದ್ರಾ ದೇವಸ್ಥಾನ, ಆರಾಳ, ಹಣವಾಳ, ಚಿಕ್ಕಜಂತಕಲ್ ಮತ್ತು ಕಾರಟಗಿ ತಾಲೂಕಿನ ಬರಗೂರು ಗ್ರಾಮದ ಹಳ್ಳದ ಬಸಪ್ಪ ದೇವಸ್ಥಾನದಲ್ಲಿ, ಶ್ರೀರಾಮನಗರ, ಮುಷ್ಟೂರು ಹಾಗೂ ಇನ್ನಿತರ ಗ್ರಾಮಗಳಲ್ಲಿ ಸಾರ್ವತ್ರಿಕವಾಗಿ ಉದಯರವಿ ಅವರೇ ಇಸ್ಪೀಟ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ನಿಮ್ಮ ಮೇಲೆ ಕೇಸ್ ದಾಖಲಿಸಿ ನಿಮ್ಮೆಲ್ಲರನ್ನು ಗಡಿಪಾರು ಮಾಡುತ್ತೇನೆ ಎಂದು ಹೆದರಿಸುತ್ತಾರೆ.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೌಡಿ ಶೀಟರ್‌ಗಳ ಜೊತೆಯಲ್ಲಿ ಉದಯರವಿ ನಿಕಟಪೂರ್ವ ಸಂಬಂಧವನ್ನು ಹೊಂದಿ ಕಾನೂನು ಬಾಹಿರ ಚಟುವಟಿಕೆ ಮಾಡಲು ಪ್ರೋತ್ಸಾಹಿಸಿದ್ದಾರೆ. ಇಸ್ಪೀಟ್ ಮತ್ತು ಶ್ರೀದೇವಿ ಹೆಸರಿನ ಮಟ್ಕಾ ದಂದೆಯಲ್ಲಿ ಪಾಲುದಾರನಾಗಿ ಕಿಂಗ್‍ಪಿನ್‍ನಂತೆ ಇದ್ದು, ಇದರಿಂದ ಬಂದ ಹಣದಲ್ಲಿ ಇತ್ತೀಚಿಗೆ ಹೊಸಪೇಟೆಯಲ್ಲಿ 3 ಕೋಟಿ 20 ಲಕ್ಷ ರೂಪಾಯಿಗೆ ಕಮರ್ಷಿಯಲ್ ಫ್ಲ್ಯಾಟನ್ನು ಖರೀದಿ ಮಾಡಿ ಅದಕ್ಕೆ ಗಂಗಾವತಿಯ ಪ್ರಮುಖ ಉದ್ಯಮಿಯೊಬ್ಬರನ್ನು ಸಾಕ್ಷಿ ಸಹಿ ಮಾಡಿಸಿದ್ದು, ಚಿಕ್ಕಜಂತಕಲ್ ಗ್ರಾಮದಲ್ಲಿ 5 ಎಕರೆ ಜಮೀನು ಖರೀದಿಸಿ, ಜಮೀನುದಾರರಿಗೆ ಚೆಕ್‍ನ್ನು ನೀಡಿ ಭೂಮಿಯನ್ನು ನುಂಗಿ ಸದರಿ ಮಾಲೀಕರಿಗೆ ಹಣವನ್ನು ನೀಡದೇ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಗಂಗಾವತಿ ತಾಲೂಕಿನ ಶ್ರೀರಾಮನಗರ ಮತ್ತು ವಿದ್ಯಾನಗರಗಳಲ್ಲಿ ಹಾಗೂ ಬಸಾಪಟ್ಟಣ ಗ್ರಾಮಗಳಲ್ಲಿ ಅಕ್ರಮ ವೇಶ್ಯಾವಾಟಿಕೆಯನ್ನು ನಡೆಸಲು ಕುಮ್ಮಕ್ಕು ನೀಡಿ ಪಾಲು ದಾರರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ – ಕಾರಣ ನಿಗೂಢ

Share This Article
Leave a Comment

Leave a Reply

Your email address will not be published. Required fields are marked *