ಕೊಪ್ಪಳ: ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್‌ಗೆ (Heartattack) ಯುವಜನರೇ ಬಲಿಯಾಗುತ್ತಿದ್ದು, ಕೊಪ್ಪಳದಲ್ಲಿ (Koppala) ಬುಧವಾರ ಹೃದಯಾಘಾತದಿಂದ 26 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಪ್ಪಳದ ಶಿವಗಂಗಾ ಲೇಔಟ್ ನಿವಾಸಿ ಮಂಜುಳಾ ಹೂಗಾರ್ (26) ಮೃತಪಟ್ಟಿದ್ದಾರೆ. ಮಧ್ಯಾಹ್ನ ಮಂಜುಳಾಗೆ ಲೋ ಬಿಪಿಯಾಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!
ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿದ್ದ ಮಂಜುಳಾ, ಕಳೆದ ಕೆಲ ದಿನಗಳಿಂದ ಕೆಲಸ ತೊರೆದು ವಾಪಾಸ್ ಕೊಪ್ಪಳಕ್ಕೆ ಬಂದಿದ್ದಳು. ಮಂಜುಳಾ, ಪೋಷಕರು ಕೊಪ್ಪಳದ ಬಸ್ ನಿಲ್ದಾಣದ ಬಳಿ ಹೂವಿನ ವ್ಯಾಪಾರಸ್ಥರಾಗಿದ್ದಾರೆ.