ಕೊಪ್ಪಳ: ʻಪಬ್ಲಿಕ್ ಟಿವಿʼ ಸುದ್ದಿ ನಿರೂಪಕ ಅರುಣ್ ಬಡಿಗೇರ್ (Arun Badiger) ಅವರಿಗೆ ಕೊಪ್ಪಳ ಮೀಡಿಯಾ ಕ್ಲಬ್ (Koppala Media Club) 2025ರ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪತ್ರಿಕಾ ದಿನಾಚರಣೆ ಹಿನ್ನೆಲೆ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಮಿಡಿಯಾ ಕ್ಲಬ್ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಎಸ್‌ಎಫ್ಎಸ್ ಸ್ಕೂಲ್‌ನ ಫಾದರ್ ಜಬಮಲೈ ಆಗಮಿಸಿದ್ದರು.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಬಳಿಕ ಮಾತನಾಡಿದ ನಿರೂಪಕ ಅರುಣ್ ಬಡಿಗೇರ್ ಪ್ರಸ್ತುತ ದಿನದ ಪತ್ರಿಕೋದ್ಯಮದ ಬಗ್ಗೆ ಮಾತನಾಡಿದರು. ಟಿ ವಿ ಮಾಧ್ಯಮಗಳ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವವರಿಗೆ ಮಾತ್ರ ಗೌರವ ನೀಡಬೇಡಿ. ಸ್ಕ್ರೀನ್ ಹಿಂದೆ ಸಾಕಷ್ಟು ಜನರ ಪರಿಶ್ರಮ ಇರತ್ತೆ. ಪರದೆ ಹಿಂದೆ ಕೆಲಸ ಮಾಡುವವರಿಗೂ ಇಂತಹ ಗೌರವಗಳು ಸಲ್ಲಬೇಕು ಎಂದು ಅಭಿಪ್ರಾಯ ಪಟ್ಟರು.