ಕೊಪ್ಪಳ: ಕನ್ನಡ ಭಾಷಾಂತರ ಮಾಡೋಕೆ ಬ್ಯಾಂಕ್ ಮ್ಯಾನೇಜರ್ (Bank Manager) ಸಿಬ್ಬಂದಿಯನ್ನು ಕರೆದ ಘಟನೆ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ (Canara Bank) ನಡೆದಿದೆ.ಇದನ್ನೂ ಓದಿ: ತಿರುಪತಿಯಲ್ಲಿ ಭಕ್ತರ ಶೀಘ್ರ ದರ್ಶನಕ್ಕಾಗಿ `ಶ್ರೀವಾಣಿ ದರ್ಶನ’ ಟಿಕೆಟ್ ಸೇವೆ ಆರಂಭ
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಬ್ಯಾಂಕ್‌ನಲ್ಲಿ ಮ್ಯಾನೇಜರ್ ಒಬ್ಬರು ಕನ್ನಡ ಭಾಷಾಂತರ ಮಾಡೋದಕ್ಕೆ ಸಿಬ್ಬಂದಿಯನ್ನ ಕರೆದ ಪ್ರಸಂಗ ನಡೆದಿದೆ. ಕೆನರಾ ಬ್ಯಾಂಕ್ ಅಧಿಕಾರಿ ಬ್ಯಾಂಕ್‌ಗೆ ಬಂದ ಗ್ರಾಹಕರನ್ನು ಹಿಂದಿಯಲ್ಲಿ ಮಾತನಾಡಿಸಿದ್ದಾರೆ. ಹಿಂದಿ ಅರ್ಥವಾಗದ ಗ್ರಾಹಕರು ಕನ್ನಡದಲ್ಲಿ ಮಾತನಾಡಿ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮ್ಯಾನೇಜರ್ ನನಗೆ ಹಿಂದಿ, ತೆಲುಗು ಮಾತ್ರ ಬರೋದು ಅಂತ ಹೇಳಿ ಭಾಷಾಂತರ ಮಾಡೋಕೆ ಸಿಬ್ಬಂದಿಯೊಬ್ಬರನ್ನ ಕರೆದಿದ್ದಾರೆ.
ಇದಕ್ಕೆ ಸಿಟ್ಟಾದ ಗ್ರಾಹಕರು, ಟ್ರಾನ್ಸಲೇಟರ್‌ಗಳನ್ನು ಕರೆದುಕೊಂಡು ಬಂದು ಮಾತನಾಡಬೇಕಾ ಅಂತ ಪ್ರಶ್ನಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಬಿಹಾರದ 56 ಲಕ್ಷ ಜನರನ್ನು ವೋಟರ್ ಲಿಸ್ಟ್‌ನಿಂದ ತೆಗೆದ ಚುನಾವಣಾ ಆಯೋಗ