ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಬಂದ್ – ಮಂಗಳವಾರ ಖಾಸಗಿ ಶಾಲೆಗಳಿಗೆ ರಜೆ

1 Min Read

– ಕೊಪ್ಪಳ ವಿವಿ ಪರೀಕ್ಷೆ ಮುಂದೂಡಿಕೆ

ಕೊಪ್ಪಳ: ಬಲ್ಡೋಟಾ ಕಾರ್ಖಾನೆ (Baldota Factory) ವಿಸ್ತರಣೆ ವಿರೋಧಿಸಿ ನಾಳೆ ಕೊಪ್ಪಳ ಬಂದ್ (Koppal Bandh) ಹಿನ್ನೆಲೆ ನಾಳೆ (ಮಂಗಳವಾರ) ಖಾಸಗಿ ಶಾಲೆಗಳಿಗೆ ರಜೆ (Holiday) ಘೋಷಿಸಿದ್ದು, ಕೊಪ್ಪಳ ವಿವಿ ಪರೀಕ್ಷೆ ಮುಂದೂಡಲಾಗಿದೆ.

ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದು, ಕೊಪ್ಪಳ ವಿವಿಯ (Koppal VV) ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ವಿವಿ ಪರೀಕ್ಷಾಂಗ ಕುಲಸಚಿವ ವಿವಿ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ

ನಾಳೆ ಕೊಪ್ಪಳ-ಭಾಗ್ಯನಗರ ಬಂದ್ ಹಿನ್ನೆಲೆ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಖಾಸಗಿ ಶಾಲೆಗಳ ಒಕ್ಕೂಟ ರಜೆ ಘೋಷಿಸಿದ್ದು, ಕೊಪ್ಪಳ ವಿವಿ ಪರೀಕ್ಷೆಗಳನ್ನು ಮುಂದೂಡಿದೆ. ಇದನ್ನೂ ಓದಿ: ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ – ಲುಟ್ಯೆನ್ಸ್ ಪ್ರತಿಮೆ ತೆಗೆದು ರಾಜಗೋಪಾಲಾಚಾರಿ ಪುತ್ಥಳಿ ಅನಾವರಣ

Share This Article