– ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡದೇ ಹೋದ್ರೆ ಉಗ್ರ ಹೋರಾಟ
ಬೆಂಗಳೂರು: ಮಹದಾಯಿ ನಮ್ಮ ರಾಜ್ಯದ ಹಕ್ಕು. ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಗೋವಾ ಸಿಎಂ ಯಾರು ಎಂದು ಮಹದಾಯಿ ಹೋರಾಟಗಾರ, ಶಾಸಕ ಕೋನರೆಡ್ಡಿ (Konareddy) ಕಿಡಿಕಾರಿದ್ದಾರೆ.
ಮಹದಾಯಿಗೆ (Mahadayi) ಕೇಂದ್ರ ಅನುಮತಿ ಕೊಡಲ್ಲ ಎಂಬ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಗೋವಾ ಸಿಎಂ ಈ ರೀತಿ ಮಾತನಾಡಿರೋದು ಸರಿಯಲ್ಲ. ಕೇಂದ್ರ ಅನುಮತಿ ಕೊಡಲ್ಲ ಎಂದು ಹೇಳಿಕೆ ನೀಡೋಕೆ ಇರ‍್ಯಾರು? ಗೋವಾದಲ್ಲಿ ಇಬ್ಬರು ಸಂಸದರಿದ್ದಾರಷ್ಟೇ. ನಮ್ಮಲ್ಲಿ 28 ಸಂಸದರಿದ್ದಾರೆ. ಅವರ ಮಾತು ಕೇಂದ್ರ ಕೇಳುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜನತೆಗೆ ಮತ್ತೊಂದು ಶಾಕ್; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು
ನಾವು ಹಾಲು, ಕಾಯಿಪಲ್ಯ ನಿಲ್ಲಿಸಿದ್ರೆ ಗೋವಾಗೆ ಏನು ಸಿಗೋದಿಲ್ಲ, ನೆನಪಿರಲಿ. ಗೋವಾದವರು ಏನೇ ಮಾಡಿದ್ರು ಮಹದಾಯಿ ತಡೆಯೋಕೆ ಆಗೊಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸರ್ವಪಕ್ಷದ ಸಭೆ ಕರೆದು, ಪ್ರಧಾನಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗುವಂತೆ ಮನವಿ ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ ಆರೋಪ – ಕೋರ್ಟ್ ತೀರ್ಪಿಗೆ ನಾನು ಬದ್ಧ: ಸಚಿವ ಜಾರ್ಜ್
ಬಿಜೆಪಿ ಅವರು ಇದರ ಬಗ್ಗೆ ಮಾತಾಡಬೇಕು. ಯಾಕೆ ಬಿಜೆಪಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ವಾ? ಹಿಂದೆ ಅನಂತ್ ಕುಮಾರ್ ಇದ್ದಾಗ ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿ ಆಗಿ ಕೆಲಸ ಮಾಡ್ತಿದ್ದರು. ಈಗ ಪ್ರಹ್ಲಾದ್ ಜೋಶಿ ಅವರು ಆ ಸ್ಥಾನವನ್ನು ತುಂಬಬೇಕು. ಮಹದಾಯಿಗೆ ಕೇಂದ್ರ ಅನುಮತಿ ಕೊಡದೇ ಹೋದರೆ ಹೋರಾಟ ಮಾಡೇ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.