ಶೂಟಿಂಗ್ ಮುಗಿಸಿದ ‘ಜೈಲರ್’ ಸಿನಿಮಾ- ಕೇಕ್ ಕತ್ತರಿಸಿ ಸಂಭ್ರಮಿಸಿದ ತಲೈವಾ

Public TV
1 Min Read

ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದ ಚಿತ್ರೀಕರಣ ಇದೀಗ ಪೂರ್ಣಗೊಂಡಿದೆ. ಕೇಕ್ ಕತ್ತರಿಸುವ ಮೂಲಕ ಜೈಲರ್ ಟೀಮ್ ಜೊತೆ ತಲೈವಾ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ.

ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar) ನಿರ್ದೇಶನದಲ್ಲಿ ‘ಜೈಲರ್’ ಸಿನಿಮಾ ಮೂಡಿ ಬಂದಿದೆ. ರಜನಿಕಾಂತ್ 169ನೇ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಬೆಟ್ಟದಷ್ಟಿದೆ. ತಲೈವಾ ಜೊತೆ ಬಹುಭಾಷಾ ತಾರೆಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವಣ್ಣ (Shivarajkumar) ಕೂಡ ರಜನಿಕಾಂತ್ ಜೊತೆ ನಟಿಸಿ ಬಂದಿದ್ದಾರೆ.

ಇತ್ತೀಚಿಗಷ್ಟೇ ‘ಜೈಲರ್’ ಸಿನಿಮಾದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಕಾರಿನಿಂದ ಇಳಿದು ಬರುವ ತಲೈವಾ ಅವರನ್ನ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದರು. ಚಿತ್ರೀಕರಣವನ್ನ ಹಾಡೊಂದರಿಂದ ಮುಕ್ತಾಯ ಮಾಡಲಾಗಿದೆ. ತಮನ್ನಾ ಜೊತೆ ಮಸ್ತ್‌ ಆಗಿರೋ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಜೈಲರ್‌ ಶೂಟಿಂಗ್‌ಗೆ ತೆರೆಬಿದ್ದಿದೆ. ಈ ಸಿನಿಮಾ ಪೂರ್ಣಗೊಂಡಿರುವ ಬಗ್ಗೆ ಚಿತ್ರತಂಡ ಸಿಹಿಸುದ್ದಿ ನೀಡಿದ್ದಾರೆ. ನಟಿ ತಮನ್ನಾ ಭಾಟಿಯಾ, ನಿರ್ದೇಶಕ ನೆಲ್ಸನ್ & ಟೀಮ್ ಜೊತೆ ರಜನಿಕಾಂತ್ ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅದ್ದೂರಿಯಾಗಿ ನಡೆಯಿತು ಅಂಬಿ ಪುತ್ರನ ಅರಿಶಿನ ಶಾಸ್ತ್ರ

‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ಕ್ಕೆ ತೆರೆಗೆ ಬರಲಿದೆ. ಬಹುಭಾಷೆಗಳಲ್ಲಿ ತೆರೆ ಕಾಣಲಿದೆ. ರಜನಿಕಾಂತ್ ನಯಾ ಲುಕ್‌ನಲ್ಲಿ ನೋಡಲು ಅಭಿಮಾನಿಗಳು ಕೂಡ ಎದುರುನೋಡ್ತಿದ್ದಾರೆ.

Share This Article