ಧನುಷ್ ನಟನೆಯ ‘ರಾಯನ್’ ರಿಲೀಸ್‌ಗೆ ಮುಹೂರ್ತ ಫಿಕ್ಸ್

Public TV
1 Min Read

ಕಾಲಿವುಡ್ ನಟ ಧನುಷ್ (Dhanush) ನಟಿಸಿ, ನಿರ್ದೇಶನ ಮಾಡುತ್ತಿರುವ ‘ರಾಯನ್’ (Raayan) ಸಿನಿಮಾದ ರಿಲೀಸ್ ಡೇಟ್ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಈಗ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ‘ರಾಯನ್’ ಅಬ್ಬರಕ್ಕೆ ದಿನಾಂಕ ಕೂಡ ನಿಗದಿಯಾಗಿದೆ. ಇದನ್ನೂ ಓದಿ:ಕಲ್ಕಿ ಪ್ರಭಾಸ್‌ಗೆ ಜೊತೆಯಾದ ವಿಜಯ್ ದೇವರಕೊಂಡ

‘ರಾಯನ್’ ಸಿನಿಮಾ ಇದೇ ಜುಲೈ 26ರಂದು ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಅನೌನ್ಸ್ ಮಾಡಿದೆ. ಎರಡನೇ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಧನುಷ್ ನಿರ್ದೇಶನದ (Direction) ರಾಯನ್ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ರಾಯನ್‌ ರಿಲೀಸ್‌ ಬಗ್ಗೆ ಅಪ್‌ಡೇಟ್‌ ಕೊಟ್ಟಿರೋದ್ರಿಂದ ಅಭಿಮಾನಿಗಳಿಗೆ ಖುಷಿಯಾಗಿದೆ. ಇದನ್ನೂ ಓದಿ:ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

ಈಗ ರಿಲೀಸ್ ಆಗಿರುವ ‘ರಾಯನ್’ ಸಿನಿಮಾದ ಪೋಸ್ಟರ್‌ನಲ್ಲಿ ಧನುಷ್ ರಗಡ್ ಆಗಿ ಲುಕ್ ಕೊಟ್ಟಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಎಸ್ ಜೆ ಸೂರ್ಯ, ಸಂದೀಪ್ ಕಿಶನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್, ಪ್ರಕಾಶ್ ರಾಜ್ ನಟಿಸಿದ್ದಾರೆ. ನಿತ್ಯಾ ಮೆನನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

2017ರಲ್ಲಿ ‘ಪಾ ಪಾಂಡಿ’ ಚಿತ್ರವನ್ನು ಧನುಷ್ ನಿರ್ದೇಶನ ಮಾಡಿದ್ದರು. ಧನುಷ್‌ಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಕೂಡ ಒಲಿದು ಬಂದಿತ್ತು. ಇನ್ನೂ ನಟನೆ, ನಿರ್ದೇಶನದ ಜೊತೆ ಗಾಯಕರಾಗಿಯೂ ಧನುಷ್‌ ಗುರುತಿಸಿಕೊಂಡಿದ್ದಾರೆ.

Share This Article