‘ಹುಡುಗರು’ ಚಿತ್ರದಲ್ಲಿ ಅಪ್ಪು ತಂಗಿ ಪಾತ್ರ ಮಾಡಿದ್ದ ಅಭಿನಯಗೆ ಮದುವೆ ಫಿಕ್ಸ್

Public TV
1 Min Read

ಹುಭಾಷಾ ನಟಿ ಅಭಿನಯ (Abhinaya) ಎಂಗೇಜ್ ಆಗಿರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಹುಡುಗರು’ (Hudugaru) ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ತಂಗಿಯಾಗಿ ನಟಿಸಿದ್ದ ಅಭಿನಯಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದನ್ನೂ ಓದಿ:ಒಟ್ಟಿಗೆ ಕಾಣಿಸಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಮಾಜಿ ಲವ್ ಬರ್ಡ್ಸ್

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅಭಿನಯ ಹಂಚಿಕೊಂಡಿರುವ ಫೋಟೋದಲ್ಲಿ, ದೇವಸ್ಥಾನದ ಗಂಟೆಯ ಮೇಲೆ ಉಂಗುರ ಬದಾಲಾಯಿಸಿಕೊಂಡಿರುವ ತಮ್ಮ ಭಾವಿ ಪತಿ ಮತ್ತು ತಮ್ಮ ಕೈಯನ್ನು ಇಟ್ಟಿದ್ದಾರೆ. ಆದರೆ ಅಭಿನಯ ಮದುವೆ ಆಗುತ್ತಿರುವ ಹುಡುಗ ಯಾರು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ನಟಿಗೆ ಅನೇಕರು ಶುಭಕೋರಿದ್ದಾರೆ.

 

View this post on Instagram

 

A post shared by M.g Abhinaya (@abhinaya_official)

ಅಂದಹಾಗೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ನಾನು ನನ್ನ ಬಾಲ್ಯದ ಸ್ನೇಹಿತನೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ. ನಾವು 15 ವರ್ಷಗಳಿಂದ ಸುಂದರವಾದ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ಅವರ ಜೊತೆ ನಾನು ಮುಕ್ತವಾಗಿ ಹಲವು ವಿಚಾರಗಳನ್ನು ಚರ್ಚಿಸುತ್ತೇನೆ. ಮದುವೆ ಬಗ್ಗೆ ಇನ್ನೂ ಯೋಚಿಸಿಲ್ಲ, ಅದಕ್ಕೆ ಸಾಕಷ್ಟು ಸಮಯವಿದೆ. ಆ ಹೆಜ್ಜೆ ಇಡುವ ಮೊದಲು ನಾನು ನನ್ನದೇ ಆದ ವೃತ್ತಿಪರ ಮತ್ತು ವೈಯಕ್ತಿಕವಾಗಿ ಸಾಧಿಸಬೇಕಾದ ಹಲವು ಗುರಿಗಳನ್ನು ಹೊಂದಿದ್ದೇನೆ ಎಂದು ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಅವರು ಬಾಲ್ಯದ ಸ್ನೇಹಿತನ ಜೊತೆಗಿನ ನಟಿಯ ಎಂಗೇಜ್‌ಮೆಂಟ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಅಭಿನಯಗೆ ಮಾತು ಬಾರದೇ ಇದ್ದರೂ, ಕಿವಿ ಕೇಳದೇ ಇದ್ದರೂ ಇವರ ನಟನೆಗೆ ಮನಸೋಲದ ಅಭಿಮಾನಿಗಳೇ ಇಲ್ಲ. ತೆಲುಗು, ತಮಿಳು, ಕನ್ನಡದಲ್ಲಿ ಅವರು ಸಕ್ರಿಯರಾಗಿದ್ದಾರೆ. ಸದ್ಯ ನಯನತಾರಾ ನಟನೆಯ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ಅಭಿನಯ ನಟಿಸುತ್ತಿದ್ದಾರೆ.

Share This Article