ಕಾರು ಅಪಫಾತ – ಶಾಸಕ ಎ.ಆರ್ ಕೃಷ್ಣಮೂರ್ತಿ ಅಪಾಯದಿಂದ ಪಾರು

Public TV
1 Min Read

ಚಾಮರಾಜನಗರ: ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿಯವರ (Kollegala MLA AR Krishnamurthy) ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಶಾಸಕರು, ಅವರ ಸಹಾಯಕ ಹಾಗೂ ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಕೊಳ್ಳೇಗಾಲ ಕ್ಷೇತ್ರದಲ್ಲಿ ಚುನಾವಣಾ (Lok Sabha Election 2024) ಪ್ರಚಾರ ಮುಗಿಸಿ ಮಧ್ಯರಾತ್ರಿ ಮೈಸೂರಿಗೆ (Mysuru) ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಆಕಸ್ಮಿಕವಾಗಿ ಶಾಸಕರ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಕಾರು ರಸ್ತೆಯ ಬದಿಗೆ ನುಗ್ಗಿ, ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇದನ್ನೂ ಓದಿ: ಹಾಡು ನಿಲ್ಲಿಸಿದ ರಂಗನಾಯಕ – ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ರಾತ್ರಿ 11:50ರ ಸಮಯವಾದ್ದರಿಂದ ಆ ಸಮಯದಲ್ಲಿ ಬೇರೆ ವಾಹನಗಳ ಓಡಾಟ ಕಡಿಮೆಯಾಗಿದ್ದು, ಜೊತೆಗೆ ಕಾರು ರಸ್ತೆಬದಿಯ ಹಳ್ಳಕ್ಕೆ ಬಂದು ನಿಂತಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬರದಿಂದ ತರಕಾರಿ ದರ ಏರಿಕೆ – ಕ್ಯಾರೆಟ್ ಸೆಂಚುರಿ, ಬೀನ್ಸ್ ಡಬಲ್ ಸೆಂಚುರಿ

Share This Article