ಕೊಳ್ಳೇಗಾಲ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ – ಹಾಲಿ, ಮಾಜಿ ಶಾಸಕರ ನಡುವೆ ಟಿಕೆಟ್ ಫೈಟ್!

Public TV
2 Min Read

ಚಾಮರಾಜನಗರ: 2023ರ ಚುನಾವಣಾ ಕಾವು ರಾಜ್ಯಾದ್ಯಂತ ಜೋರಾಗಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲೂ (Chamarajanagar) ರಾಜಕೀಯ ಆಟ ಶುರುವಾಗಿದ್ದು, ಕೊಳ್ಳೇಗಾಲ (Kollegala) ನಗರಸಭೆ ಉಪಚುನಾವಣೆ ರಿಸಲ್ಟ್ ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮೂಲಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.

ಬಿಎಸ್‌ಪಿಯಿಂದ (BSP) ಉಚ್ಚಾಟನೆಗೊಂಡು ಇದೀಗ ಕೇಸರಿ ಪಡೆ ಸೇರಿರುವ ಶಾಸಕ ಎನ್.ಮಹೇಶ್ (N.Mahesh) ವಿರುದ್ಧ ಪಕ್ಷದಲ್ಲೇ ವಿರೋಧಿಗಳು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ನಗರಸಭೆ ಉಪಚುನಾವಣೆ. ಬಿಎಸ್ಪಿ ತ್ಯಜಿಸಿ ಬಂದಿದ್ದ ಕಮಲ ಹಿಡಿದ ಆರು ಸದಸ್ಯರ ಗೆಲುವು. 6 ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಶಾಸಕರಾಗಿರುವ ಜಿ.ಎನ್.ನಂಜುಂಡಸ್ವಾಮಿ (G.N.Nanjundaswamy) ತಾವೇ ಅಭ್ಯರ್ಥಿ ಎಂಬ ಉಮೇದಿನಲ್ಲಿದ್ದರು. ಆದರೆ ಉಪಚುನಾವಣೆಯ ಗೆಲುವು ಶಾಸಕ ಮಹೇಶ್ ಪಾಲಿಗೆ ವರವಾಗಿದೆ. ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa), ಸಚಿವ ಸೋಮಣ್ಣ ಅವರು ಎನ್.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದು ನಂಜುಂಡಸ್ವಾಮಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹೀಗಾಗಿ ಅವರು ಎನ್.ಮಹೇಶ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯಲ್ಲಿ ಯಾರಿಗೂ ಟಿಕೆಟ್ ಘೋಷಣೆಯಾಗಿಲ್ಲ. ನಾನು ಕೂಡ ಪ್ರಬಲ ಆಕಾಂಕ್ಷಿ ಅಂತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕಮಿಷನ್ ಆರೋಪ

ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿರುವ ಎನ್.ಮಹೇಶ್ 2023ರ ಅದೃಷ್ಟ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಗರಸಭೆ ಉಪಚುನಾವಣೆ ಫಲಿತಾಂಶ ಬಿಜೆಪಿ ಪರ ಬಂದಿರುವುದು ಮಾತ್ರವಲ್ಲದೆ ರಾಜ್ಯ ಮಟ್ಟದ ನಾಯಕರು ಹೋದಲ್ಲಿ ಬಂದಲ್ಲಿ ಕೊಳ್ಳೇಗಾಲ ಗೆಲುವನ್ನು ಪುನರುಚ್ಛರಿಸುತ್ತಿರುವುದು ಮಹೇಶ್ ಸಂತಸಕ್ಕೆ ಕಾರಣವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಇದರ ಜೊತೆಗೆ ತಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಜಾಣ್ಮೆಯ ನಡೆ ಅನುಸರಿಸ್ತಿದ್ದಾರೆ.

ಸದ್ಯ ಗಡಿ ಜಿಲ್ಲೆಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಕಚ್ಚಾಟ ಆಂತರಿಕವಾಗಿದೆಯಾದರೂ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಹೈಕಮಾಂಡ್ ಈಗಲೇ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡದಿದ್ರೆ ಮುಂದೆ ಬಂಡಾಯ ಸ್ಪೋಟವಾಗುವ ಸಾಧ್ಯತೆಯೇ ಹೆಚ್ಚಿದೆ. ಇದನ್ನೂ ಓದಿ: ಮಹೇಶ್ ಕಮಾಲ್, ಬಿಜೆಪಿಗೆ ಭರ್ಜರಿ ಗೆಲುವು – 7 ಅನರ್ಹರಲ್ಲಿ 6 ಮಂದಿ ಜಯಭೇರಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *