ಅಧಿಕಾರಕ್ಕಾಗಿ ತನ್ನ ವಿರುದ್ಧ ವಿಪಕ್ಷಗಳಿಂದ ಬಾಂಗ್ಲಾ ಚಳುವಳಿಯಂತೆ ಪ್ರತಿಭಟನೆ: ಮಮತಾ ಬ್ಯಾನರ್ಜಿ

Public TV
1 Min Read

ಕೋಲ್ಕತ್ತಾ: ಸಿಪಿಐ(ಎಂ), ಬಿಜೆಪಿ ಪಶ್ಚಿಮ ಬಂಗಾಳದಲ್ಲಿ (West Bengal) ಅಧಿಕಾರ ಹಿಡಿಯಲು ಬಾಂಗ್ಲಾದೇಶದಂತಹ (Bangladesh) ಪ್ರತಿಭಟನೆಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗಂಭೀರ ಆರೋಪ ಮಾಡಿದ್ದಾರೆ.

ಟ್ರೈನಿ ವೈದ್ಯೆಯ  ಅತ್ಯಾಚಾರ ಮತ್ತು ಕೊಲೆ (Rape and Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೂ ದುರುದ್ದೇಶಪೂರಿತವಾಗಿ ಸರ್ಕಾರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ದೂರಿದರು. ಇದನ್ನೂ ಓದಿ: ನನಗೂ ಮಗಳಿದ್ದಾಳೆ: ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಹೋರಾಟಕ್ಕೆ ಟಿಎಂಸಿ ಸಂಸದ ಬೆಂಬಲ


ನೀವು ಕೂಡಲೇ ಕೆಲಸಕ್ಕೆ ಮರಳಬೇಕು. ನನ್ನ ಸರ್ಕಾರವು ಸಿಬಿಐಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಪ್ರತಿಭಟನಾ ನಿರತ ವೈದ್ಯರಲ್ಲಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ಕೋಲ್ಕತ್ತಾ ಪೊಲೀಸರು ಈಗಾಗಲೇ 90% ಪ್ರಕರಣದ ತನಿಖೆಯನ್ನು ಮುಗಿಸಿದ್ದು ಉಳಿದ 10% ತನಿಖೆಯನ್ನು ಸಿಬಿಐ ಆಗಸ್ಟ್‌ 18ರ ಒಳಗಡೆ ಮುಗಿಸಬೇಕು. ಆಗಸ್ಟ್‌ 17,18,19 ರಂದು ಅತ್ಯಾಚಾರಗೈದ ಕಾಮುಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

Share This Article