ಬೆಂಗಳೂರು | ಕೋಲ್ಕತ್ತಾ ಮೂಲದ ಮಹಿಳೆ ಮೇಲೆ ಗ್ಯಾಂಗ್ ರೇಪ್ – ಆರು ಮಂದಿ ಅರೆಸ್ಟ್

Public TV
1 Min Read

ಬೆಂಗಳೂರು: ಪೊಲೀಸರ ಇರ್ನ್ಫಾಮರ್ ರೀತಿಯಲ್ಲಿ ಬಂದು ಮಹಿಳೆಯೊಬ್ಬರ ಮೇಲೆ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಆರು ಜನರನ್ನು ಮಾದನಾಯಕನಹಳ್ಳಿ ಪೊಲೀಸರು (Madanayakanahalli) ಬಂಧಿಸಿದ್ದಾರೆ.

ನವೀನ್, ಕಾರ್ತಿಕ್, ಶುಯೋಗ್, ಸೀನ, ಜಂಗ್ಲಿ, ಪೃಥ್ವಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.ಇದನ್ನೂ ಓದಿ: ಹಾವೇರಿ | ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಮೂವರು ದುರ್ಮರಣ

ಬೆಂಗಳೂರು (Bengaluru) ಹೊರವಲಯ ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ಕೆಲಸ ಹುಡುಕಿಕೊಂಡು ಇತ್ತೀಚಿಗೆ ಕೋಲ್ಕತ್ತಾ ಮೂಲದ ಮಹಿಳೆಯೊಬ್ಬರು ಬಂದಿದ್ದರು. ಈ ಮಹಿಳೆಯ ಮನೆಗೆ 7 ಜನ ಕೀಚಕರು ಕಂಠಪೂರ್ತಿ ಕುಡಿದು, ಪೀಣ್ಯ ಪೊಲೀಸರ ಇನ್ಫಾರ್ಮರ್ ಎಂಬಂತೆ ಬಂದಿದ್ದಾರೆ.

ನಿಮ್ಮ ಮನೆಯಲ್ಲಿ ಡ್ರಗ್ಸ್ ಇದೆ ಕೊಡಿ ಎಂದು ಒಳಗೆ ನುಗ್ಗಿ, ಮಹಿಳೆ ಮೊಬೈಲ್, 50 ಸಾವಿರ ರೂ. ಹಣವನ್ನು ದೋಚಿದ್ದಾರೆ. ಬಳಿಕ ಮನೆಯಲ್ಲಿದ್ದ ಪುರುಷನನ್ನು ಬ್ಯಾಟ್‌ನಿಂದ ಥಳಿಸಿ ಕಟ್ಟಿಹಾಕಿ, ಮಹಿಳೆಯನ್ನು ಪಕ್ಕದ ಮನೆಯೊಂದಕ್ಕೆ ಎಳೆದೊಯ್ದು ಕೃತ್ಯ ಎಸಗಿದ್ದಾರೆ.

ಸದ್ಯ ಆರು ಜನರನ್ನು ಬಂಧಿಸಲಾಗಿದ್ದು, ಎ1 ಮಿಥುನ್‌ಗಾಗಿ ಮಾದನಾಯಕನಹಳ್ಳಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೃತ್ಯ ಎಸಗಿದ ಆರೋಪಿಗಳನ್ನು ಮಹಿಳೆ ವಾಸವಿದ್ದ ಅಕ್ಕಪಕ್ಕದಲ್ಲೇ ಮನೆಗೆಲಸ ಮಾಡಿಕೊಂಡಿದ್ದವರು ಎನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ – ನಟಿ ರಿಯಾ ಚಕ್ರವರ್ತಿಗೆ CBIನಿಂದ ಕ್ಲೀನ್‌ಚಿಟ್

Share This Article