ಕೋಲಾರದ ಹರಿಕಥೆ ವಿದ್ವಾನ್ ಎನ್.ಆರ್. ಜ್ಞಾನಮೂರ್ತಿ ಬೆಂಗಳೂರಿನಲ್ಲಿ ನಿಧನ

Public TV
1 Min Read

ಬೆಂಗಳೂರು: ಕೀರ್ತನಕಾರರು ಮತ್ತು ಹರಿಕಥೆ ವಿದ್ವಾನ್ ಎನ್.ಆರ್. ಜ್ಞಾನಮೂರ್ತಿ (N R Gnanamurthy) ಅವರು ಬೆಂಗಳೂರಿನಲ್ಲಿ ಇಂದು (ಜು. 28) ನಿಧನರಾಗಿದ್ದಾರೆ.

ಮೂಲತಃ ಕೋಲಾರ (Kolar) ತಾಲೂಕಿನ ರಾಮಸಂದ್ರದ ಅವರಿಗೆ 73 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಮುಂಜಾನೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

ಅವಿವಾಹಿತರಾಗಿದ್ದ ಅವರು, ತಮ್ಮ ಜೀವನವನ್ನು ಹರಿಕಥೆಗಾಗಿಯೇ ಮೀಸಲಿಟ್ಟಿದ್ದರು. ಅವರಿಗೆ ಕರ್ನಾಟಕ ಕಲಾಶ್ರೀ, ಬಸವಶ್ರೀ, ಕುಮಾರ ವ್ಯಾಸ ಸೇರಿ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.

ಎನ್.ಆರ್. ಜ್ಞಾನಮೂರ್ತಿ ಅವರ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Share This Article