ಮಚ್ಚಿನಿಂದ ಪೇದೆ ಮೇಲೆ ಹಲ್ಲೆ – ರೌಡಿಶೀಟರ್‌ಗೆ ಗುಂಡೇಟು

Public TV
1 Min Read

ಕೋಲಾರ: ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸ್ ಪೇದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ರೌಡಿಶೀಟರ್ ಕಾಲಿಗೆ ಅಂಡರ್‌ಸನ್ ಪೇಟೆ ಪೊಲೀಸರು (Police) ಗುಂಡೇಟು ನೀಡಿದ್ದಾರೆ.

ಗುಂಡೇಟು ತಿಂದ ರೌಡಿಶೀಟರ್‌ನನ್ನು ಸ್ಟಾಲಿನ್ ಎಂದು ಗುರುತಿಸಲಾಗಿದೆ. ಆರೋಪಿ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ. ಆತನ ಬಂಧನಕ್ಕೆ ಅಂಡರ್‌ಸನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಮಚ್ಚಿನಿಂದ ಪೊಲೀಸ್ ಪೇದೆ ಸುನೀಲ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಆತನಿಗೆ ಎಚ್ಚರಿಕೆ ಕೊಟ್ಟರು ಮಾತು ಕೇಳದ ಕಾರಣ, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: Hathras Tragedy: ಇಬ್ಬರು ಮಹಿಳೆಯರು ಸೇರಿ ಸತ್ಸಂಗ ಸಂಘಟನಾ ಸಮಿತಿಯ 6 ಮಂದಿ ಅರೆಸ್ಟ್‌

ಗಾಯಾಳು ಪೇದೆ ಹಾಗೂ ರೌಡಿಶೀಟರ್‌ನ್ನು ಕೆಜಿಎಫ್ (KGF) ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆಜಿಎಫ್ ಡಿವೈಎಸ್‍ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರದ ಕೆಜಿಎಫ್‍ನ ಅಂಡರ್‌ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 10 ವರ್ಷದಾಕೆಯ ಮೇಲೆ 10 ಜನರಿಂದ ಗ್ಯಾಂಗ್‌ರೇಪ್- ಬಾಲಕಿ ಗರ್ಭಿಣಿ

Share This Article