ಕೋಲಾರದ JDS ಮುಖಂಡ ಸುಹೆಲ್ ದಿಲ್ ನವಾಜ್ AAP ಸೇರ್ಪಡೆ

Public TV
1 Min Read

ನವದೆಹಲಿ: ಕೋಲಾರದ (Kolar) ಜೆಡಿಎಸ್ (JDS) ಮುಖಂಡ ಸುಹೆಲ್ ದಿಲ್ ನವಾಜ್ (Suhel Dil Nawaz) ಆಮ್ ಆದ್ಮಿ ಪಾರ್ಟಿಯ (AAP) ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರ ಸಮ್ಮುಖದಲ್ಲಿ ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಸುಹೆಲ್ ದಿಲ್ ನವಾಜ್ ಅವರ ಕುರಿತು ಮಾತನಾಡಿದ ದಿಲೀಪ್ ಪಾಂಡೆ, ಸುಹೆಲ್ ಅವರು ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಬ್ದುಲ್ ಲತೀಫ್ ಕರ್ನಾಟಕದ ರೇಷ್ಮೆ ಉದ್ಯಮದ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.

ಸುಹೆಲ್ ಅವರು ಇಂಗ್ಲೆಂಡ್‌ನಲ್ಲಿ ಎಂಎ, ಎಲ್‌ಎಲ್‌ಬಿ, ಐಎಲ್‌ಟಿ ಶಿಕ್ಷಣ ಪಡೆದಿದ್ದಾರೆ. ಕಿರಿಯ ವಯಸ್ಸಿನಿಂದಲೂ ರಾಜಕೀಯ ಹೋರಾಟಗಳಲ್ಲಿ ಆಸಕ್ತಿ ಹೊಂದಿದ್ದಾರೆ. ವಿದ್ಯಾರ್ಥಿ ನಾಯಕರಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪರಿಚಯಿಸಿದರು. ಇದನ್ನೂ ಓದಿ: ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ

ಸುಹೆಲ್ ದಿಲ್ ನವಾಜ್ ಮಾತನಾಡಿ, ಜನಾನುರಾಗಿ ಆಡಳಿತ ಹೇಗಿರುತ್ತದೆ ಎಂಬುದನ್ನು ಆಮ್ ಆದ್ಮಿ ಪಾರ್ಟಿಯು ತೋರಿಸಿಕೊಡುತ್ತಿದೆ. ಆರೋಗ್ಯ, ಶಿಕ್ಷಣ, ಸಾರಿಗೆ ಮುಂತಾದ ಕ್ಷೇತ್ರದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಎಎಪಿ ಸರ್ಕಾರಗಳು ಮಾಡಿರುವ ಸಾಧನೆ ಪ್ರಶಂಸನೀಯ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡಲು ಸಾಧ್ಯವಿದೆ ಎಂಬುದನ್ನು ಪಕ್ಷವು ಸಾಧಿಸಿ ತೋರಿಸಿದೆ. ಕರ್ನಾಟಕದ ಶೇ.40 ಸರ್ಕಾರವನ್ನು ಕಿತ್ತೊಗೆದು, ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಜನರು ಪಣ ತೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ವೋಟಿಗಾಗಿ ಕಾಂಗ್ರೆಸ್‌ನವರು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ : ಆರಗ ಜ್ಞಾನೇಂದ್ರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *