ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೊ ನೀಡಲ್ಲ – ಕೋಲಾರ ರೈತರ ಶಪಥ

By
1 Min Read

ಕೋಲಾರ: ಪಹಲ್ಗಾಮ್‌ ಉಗ್ರ ದಾಳಿ (Pahalgam Terror Attack) ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಸಿಂಧೂ ನದಿ ನೀರು ಒಪ್ಪಂದ ಅಮಾನತು ಮಾಡಿ ಪಾಕ್‌ಗೆ ಜಲಾಘಾತ ನೀಡಿತು. ಇದೇ ಮಾದರಿಯಲ್ಲಿ ಕೋಲಾರ ರೈತರು ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಪಾಕ್‌ಗೆ ಟೊಮ್ಯಾಟೊ ಸರಬರಾಜು ನಿಲ್ಲಿಸಿ ಶಾಕ್‌ ಕೊಟ್ಟಿದ್ದಾರೆ.

ಕೋಲಾರದಿಂದ (Kolar) ಪಾಕಿಸ್ತಾನಕ್ಕೆ (Pakistan) ಸರಬರಾಜು ಮಾಡುತ್ತಿದ್ದ ಟನ್ ಗಟ್ಟಲೇ ಟೊಮ್ಯಾಟೊವನ್ನು ಈಗಾಗಲೇ ನಿಲ್ಲಿಸಲಾಗಿದೆ. ಪೆಹಲ್ಗಾಮ್ ದಾಳಿ ಬಳಿಕ ಟೊಮ್ಯಾಟೊ ನೀಡದೆ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಬದ್ಧ ಎನ್ನುತ್ತಿದ್ದಾರೆ. ಈ ಹಿಂದೆ ಉಗ್ರರು ಹಾಗೂ ಪಾಕಿಸ್ತಾನ ದಾಳಿ ಮಾಡಿದ್ರು. ಮಾನವೀಯ ದೃಷ್ಟಿಯಿಂದ ಟೊಮ್ಯಾಟೊ ಕೊಡುತ್ತಿದ್ದೇವೆ. ಆದರೆ, ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ನರಮೇಧ ಬೆನ್ನಲ್ಲೇ ಕೋಲಾರದ ರೈತರು ಪಾಕಿಸ್ತಾನಕ್ಕೆ ಟೊಮ್ಯಾಟೊ ಸರಬರಾಜು ಮಾಡದಿರಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಅಫ್ಘಾನ್‍ನಿಂದ ಭಾರತಕ್ಕೆ ಸರಕು ಸಾಗಾಟ – ಪಾಕ್‍ನಿಂದ ಅನುಮತಿ

ಪ್ರತಿ ದಿನ 800 ರಿಂದ 900 ಟನ್ ಟೊಮ್ಯಾಟೊ ಸರಬರಾಜು ಮಾಡುತ್ತಿದ್ದ ರೈತರು, ನಮಗೆ ನಷ್ಟ ಆದ್ರೂ ಪರವಾಗಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ, ಜೂನ್‌ನಲ್ಲಿ ಅತಿ ಹೆಚ್ಚು ಟೊಮ್ಯಾಟೊ ರಪ್ತು ಮಾಡುತ್ತಿದ್ದ ರೈತರು, ಬೆಲೆ ಕುಸಿತವಾದ್ರೂ ಪರವಾಗಿಲ್ಲ. ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೊ ಸಹ ಕೊಡಲ್ಲ ಎನ್ನುತ್ತಿದ್ದಾರೆ. ಈಗಾಗಲೇ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಪೆಟ್ಟು ನೀಡಿತ್ತು. ಕೋಲಾರದ ರೈತರ ಈ ನಿರ್ಧಾರ ಪಾಕ್‌ಗೆ ಮತ್ತೊಂದು ಶಾಕ್ ಎನ್ನಲಾಗಿದೆ.

Share This Article