ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ವಿಧಿವಶ

Public TV
2 Min Read

ಬೆಂಗಳೂರು: ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ(80) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶುಕ್ರವಾರವಷ್ಟೇ ಮಹಾಲಕ್ಷ್ಮೀ ಲೇಔಟ್ ಕಾರ್ಯಕ್ರಮದಲ್ಲಿ ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ಪಾಲ್ಗೊಂಡಿದ್ದರು. ಅವರು ಯಾವುದೇ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ಬೆಳಗ್ಗೆ ಅವರ ಅಣ್ಣನ ಮಗ ಹರ್ಷ ಬಾಗಿಲು ತೆಗೆಯಲು ಹೋಗಿದ್ದಾರೆ. ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಯಾವಾಗ ಪ್ರಾಣ ಹೋಗಿದೆ ಎನ್ನುವುದರ ಬಗ್ಗೆ ಗೊತ್ತಿಲ್ಲ ಎಂದು ಭಕ್ತ ಮಹಾಬಲೇಶ್ವರನ ತಿಳಿಸಿದ್ದಾರೆ.

Sri Shanthaveera Mahaswamiji

ಸದ್ಯ ಈ ಕುರಿತಂತೆ ಮಾತನಾಡಿದ ಹರ್ಷ ಅವರು, ನಾನು ಬೆಳಗ್ಗೆ 9:30ಕ್ಕೆ ನೋಡಿದಾಗ ಅವರು ಪ್ರಾಣ ಬಿಟ್ಟಿದ್ದರು. ವೈದ್ಯರನ್ನು ಕರೆಸಿದ್ದೇವು. ಅವರು ಹೃದಯಘಾತದಿಂದ ಪ್ರಾಣ ಹೋಗಿದೆ ಅಂತ ತಿಳಿಸಿದರು. ಇದೀಗ ಶ್ರೀಗಳ ಅಂತಿಮ ಸಂಸ್ಕಾರ ಮಠದ ಆವರಣದಲ್ಲೇ ಮಾಡಲು ವ್ಯವಸ್ಥೆಗೊಳಿಸಲಾಗಿದೆ ಮತ್ತು ಅಂತ್ಯಕ್ರಿಯೆಯಲ್ಲಿ ಸಮಾಜದ ಮುಖಂಡರು ಭಾಗಿಯಾಗಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಸ್ಕಿನ್ ತರಿಸಿ ಸರ್ಜರಿ ಮಾಡಬೇಕಿದೆ: ಆ್ಯಸಿಡ್ ಸಂತ್ರಸ್ತೆ ಚಿಕಿತ್ಸೆಯ ಬಗ್ಗೆ ವೈದ್ಯರ ಮಾತು

ನಂತರ ಪ್ರತಿಕ್ರಿಯಿಸಿದ ಸ್ವಾಮೀಜಿಯವರ ಶಿಷ್ಯ, ಕಳೆದ 46 ವರ್ಷಗಳಿಂದ ನಾನು ಅವರ ಜೊತೆ ಇದ್ದೇನೆ. ಎಲ್ಲರನ್ನೂ ಅವರು ಚೆನ್ನಾಗಿ ನೋಡಿಕೊಂಡಿದ್ದರು. ಕಳೆದ ರಾತ್ರಿ ಕೂಡ ಊಟ ಮಾಡಿದ ಮೇಲೆ ಬಾಗಿಲು ಬಂದ್ ಮಾಡಿ ಹೊರ ಬಂದೆ. ಬೆಳಗ್ಗೆ ಎದ್ದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸ್ ಹಾಗೂ ಭಕ್ತರಿಗೆ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆ್ಯಸಿಡ್‌ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP

ಕೊಳಂದ ಮಠ 63 ಶಾಖೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಿನ ಲಾಲ್‍ಬಾಗ್, ಶಾಂತಿನಗರ ಬಸ್ ನಿಲ್ದಾಣಗಳಿಗೆ ನೂರಾರು ಎಕರೆ ಜಾಗವನ್ನು ನೀಡಿದ ಹೆಗ್ಗಳಿಕೆ ಈ ಮಠಕ್ಕಿದೆ. ಶಾಂತವೀರ ಸ್ವಾಮೀಜಿಗಳು ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು, ಯುಎಸ್‍ಎಯಲ್ಲಿ ಪಿಎಚ್‍ಡಿಯನ್ನು ಕೂಡ ಮಾಡಿದ್ದಾರೆ. ಜಲಕಂಠೇಶ್ವರ ವಿದ್ಯಾಪೀಠ, ಜಯನಗರದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ, ಕರ್ನಾಟಕ ರಾಷ್ಟ್ರ ಭಾಷಾ ಸ್ಥಾಪನೆ, ವಿಶ್ವಭಾರತಿ ವಿದ್ಯಾ ಪೀಠ ಸ್ಥಾಪನೆ ಸೇರಿದಂತೆ ಭಾರತದಲ್ಲಿ ಅನೇಕ ಸಂಸ್ಥೆಗಳನ್ನು ಶ್ರೀಗಳು ಸ್ಥಾಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *