ಕೊಹಿನೂರ್‌ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು; ಬ್ರಿಟನ್‌ನಿಂದ ವಾಪಸ್‌ ತರಿಸಿ – ರಾಷ್ಟ್ರಪತಿಗೆ ಮನವಿ

Public TV
1 Min Read

ಭುವನೇಶ್ವರ: ಕೊಹಿನೂರ್‌ ವಜ್ರವು (Kohinoor Diamond) ಜಗನ್ನಾಥ ದೇವರಿಗೆ ಸೇರಿದ್ದು, ಬ್ರಿಟನ್‌ನಿಂದ ಅದನ್ನು ಐತಿಹಾಸಿಕ ಪುರಿ ಜಗನ್ನಾಥ ದೇವಾಲಯಕ್ಕೆ (Jagannath) ವಾಪಸ್‌ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮಧ್ಯಸ್ಥಿಕೆಯಲ್ಲಿ ಕ್ರಮವಹಿಸಬೇಕು ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಮನವಿ ಮಾಡಿದೆ.

ರಾಣಿ ಎಲಿಜಬೆತ್-2 (Queen Elizabeth II) ನಿಧನ ನಂತರ, ಆಕೆಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ (Prince Charles) ಬ್ರಿಟನ್‌ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ, 105 ಕ್ಯಾರೆಟ್ ವಜ್ರವಿರುವ ಕಿರೀಟವನ್ನು ಚಾರ್ಲ್ಸ್‌ ಪತ್ನಿ ಕಾರ್ನ್‌ವಾಲ್ ಕ್ಯಾಮಿಲ್ಲಾ ಅವರು ಧರಿಸಲಿದ್ದಾರೆ. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು.

ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ಭಾಗ್ಬನ್ ಅವರದ್ದು. ಅದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಅದನ್ನು ಜಗನ್ನಾಥ ದೇವರಿಗೆ ದಾನ ಮಾಡಿದಂತೆ, ಅದನ್ನು ಭಾರತಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿಯವರಲ್ಲೂ ವಿನಂತಿಸುತ್ತೇವೆ ಎಂದು ಕೋರಿದೆ. ಇದನ್ನೂ ಓದಿ: ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಕೇಜ್ರಿವಾಲ್ – ರಿಕ್ಷಾದಲ್ಲೇ ಪ್ರಯಾಣಿಸಿ ಸರಳತೆ ಮೆರೆದ್ರು

ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು. 10 ವರ್ಷಗಳ ನಂತರ ಬ್ರಿಟಿಷರು ಕೊಹಿನೂರ್ ವಜ್ರವನ್ನು ರಣಜಿತ್‌ ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಮಾಹಿತಿ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *