‘ಮತ್ತೆ ಉದ್ಭವ’ದಲ್ಲಿ ಮತ್ತದೇ ಮನರಂಜನೆ, ರಾಜಕೀಯ ವಿಡಂಬನೆ- ನೈಜ ಘಟನೆಗಳೇ ಚಿತ್ರದ ಜೀವಾಳ!

Public TV
1 Min Read

ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರೋ ‘ಮತ್ತೆ ಉದ್ಭವ’ ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. 90ರ ದಶಕದಲ್ಲಿ ತಾವೇ ನಿರ್ದೇಶಿಸಿ ಗೆದ್ದಿದ್ದ ಉದ್ಭವ ಚಿತ್ರದ ಮುಂದುವರಿದ ಭಾಗ ಚಿತ್ರದಲ್ಲಿದ್ದು, ರಂಗಾಯಣ ರಘು ಇಲ್ಲಿ ಅನಂತ್ ನಾಗ್ ಪಾತ್ರ ನಿರ್ವಹಿಸಿದ್ದು, ಮಗನ ಪಾತ್ರದಲ್ಲಿ ನಟ ಪ್ರಮೋದ್ ನಟಿಸಿದ್ದಾರೆ.

ಜನರ ಮೂಡನಂಬಿಕೆ, ಮುಗ್ಧತೆ, ರಾಜಕೀಯ ವಿಡಂಬನೆಯನ್ನೇ ಬಂಡವಾಳವಾಗಿಟ್ಟುಕೊಂಡು ಜನರನ್ನು ಯಾಮಾರಿಸೋ ಅಪ್ಪ ಮಗನಾಗಿ ರಂಗಾಯಣ ರಘು, ಪ್ರಮೋದ್ ನಟಿಸಿದ್ದಾರೆ. ಜನರನ್ನು ಮೂರ್ಖರನ್ನಾಗಿಸುವುದನ್ನೇ ಪ್ರಧಾನವಾಗಿಟ್ಟುಕೊಂಡು ದುಡ್ಡು ಮಾಡುವ ಅಪ್ಪ ಮಗನ ಆಟ ತೆರೆ ಮೇಲೆ ಚೆಂದವಾಗಿ ಭಿತ್ತರವಾಗಿದೆ. ಗಣೇಶ ಮೂರ್ತಿಯ ಸುತ್ತ ಏಳುವ ಪ್ರಶ್ನೆಗಳು, ಟ್ವಿಸ್ಟ್ ಗಳು ಮಜಾ ನೀಡುತ್ತವೆ.

ನೈಜ ಘಟನೆಗಳೇ ‘ಮತ್ತೆ ಉದ್ಭವ’ ಚಿತ್ರದ ಕಥೆಯಾಗಿದ್ದು, ಪ್ರಸ್ತುತ ರಾಜಕೀಯ ಘಟನೆಗಳು, ಸ್ವಾಮೀಜಿಗಳ ರಾಸಲೀಲೆ ಇವೆಲ್ಲವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಎಲ್ಲವನ್ನು ಮಿಶ್ರ ಮಾಡಿ ಹೇಳುವಲ್ಲಿ ಕೊಂಚ ಎಡವೋ ನಿರ್ದೇಶಕರು ಸೆಕೆಂಡ್ ಹಾಫ್ ಲ್ಯಾಗ್ ಮಾಡಿದ್ದಾರೆ. ಒಂದಷ್ಟು ಮೈನಸ್ ಪಾಯಿಂಟ್‍ಗಳನ್ನ ಹೊರತು ಪಡಿಸಿದ್ರೆ ‘ಮತ್ತೆ ಉದ್ಭವ’ ಸಖತ್ ಮಜಾ ನೀಡುತ್ತೆ.

ಪ್ರಮೋದ್ ಅಭಿನಯದಲ್ಲಿ ಮಾಗಿದ್ದಾರೆ, ಮಿಲನ ನಾಗರಾಜ್ ರಾಜಕರಣಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿ ಅಭಿನಯಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ.

ಚಿತ್ರ: ಮತ್ತೆ ಉದ್ಭವ
ನಿರ್ದೇಶನ: ಕೋಡ್ಲು ರಾಮಕೃಷ್ಣ
ಛಾಯಾಗ್ರಹಣ: ಮೋಹನ್
ಸಂಗೀತ: ವಿ. ಮನೋಹರ್
ತಾರಾಬಳಗ: ಪ್ರಮೋದ್, ರಂಗಾಯಣ ರಘು, ಮಿಲನಾ ನಾಗರಾಜ್, ಅವಿನಾಶ್, ಸುಧಾ ಬೆಳವಾಡಿ, ಇತರರು.

ರೇಟಿಂಗ್: 3.5/5

Share This Article
Leave a Comment

Leave a Reply

Your email address will not be published. Required fields are marked *