ಮರದ ಮೇಲೆ ವಿದ್ಯಾರ್ಥಿನಿ ರುಂಡ ಪತ್ತೆ

Public TV
1 Min Read

ಕೊಡಗು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಬಾಲಕಿ ರುಂಡ ಪತ್ತೆಯಾಗಿದೆ. ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿ ತಲೆ ಸಿಕ್ಕಿದೆ.

ಕೊಡಗಿನ (Kodagu) ಕುಂಬಾರಗಡಿಯಲ್ಲಿ ಹತ್ಯೆ ನಡೆದಿತ್ತು. ಕೊಲೆ ಆರೋಪಿ ಈಗ ಪೊಲೀಸರ ವಶದಲ್ಲಿದ್ದು, ಬಾಲಕಿಯ ತಲೆ ಶೋಧಕ್ಕಾಗಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದಿದ್ದರು. ಹತ್ಯೆ ಮಾಡಿದ್ದ ಸ್ಥಳದ ಸಮೀಪದಲ್ಲೇ ಮರವೊಂದರಲ್ಲಿ ಬಾಲಕಿಯ ತಲೆ ಸಿಕ್ಕಿದೆ. ಇದನ್ನೂ ಓದಿ: ಕೊಡಗು: ಬಾಲಕಿಯ ಭೀಕರ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್‌ – ಇನ್ನೂ ಪತ್ತೆಯಾಗದ ರುಂಡ

ಬಾಲಕಿ ತಲೆಯನ್ನು ಮರದ ಮೇಲಿಟ್ಟಿರುವುದಾಗಿ ಆರೋಪಿ ಹೇಳಿದ್ದ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ಲಾಸ್ಟಿಕ್ ಚೀಲದ ಬ್ಯಾಗಿನಲ್ಲಿ ತಲೆ ಸಾಗಿಸಿದ್ದಾರೆ.

ನಿನ್ನೆ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾ ತಲೆ ಪತ್ತೆಯಾಗಿರಲಿಲ್ಲ. ಹುಡುಕಾಡಿದ್ದ ಸ್ಥಳದಲ್ಲೇ ಮರದ ಮೇಲೆ ಆರೋಪಿ ತಲೆ ಇರಿಸಿದ್ದ. ತಲೆ ವಶಕ್ಕೆ ಪಡೆದು ಹುಡುಗಿ ಮನೆ ಬಳಿಗೆ ಮಹಜರ್‌ಗೆ ಪೊಲೀಸರು ಹೋಗಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ SSLC ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರ ಕೊಲೆ!

ತಂಗಿಯ ತಲೆ ನೋಡುತ್ತಲೇ ಅಣ್ಣ ದಿಲೀಪ್ ರೋಷಗೊಂಡ. ಆಗ ದಿಲೀಪ್‌ಗೆ ನೀರು ಕುಡಿಸಿ ಪೊಲೀಸರು ಸಮಾಧಾನಪಡಿಸಿದರು. ಗನ್ ತೆಗೆದುಕೊಂಡು ಬಂದು ಆರೋಪಿಯ ಶೂಟ್ ಮಾಡಲು ಮುಂದಾದ. ಕೂಡಲೇ ದಿಲೀಪ್‌ನನ್ನು ಹಿಡಿದು ಪೊಲೀಸರು ಪಾಪಸ್ ಕರೆತಂದರು.

Share This Article