Kodagu | ಸ್ವಿಮ್ಮಿಂಗ್ ಪೂಲ್‌ಗೆ ಧುಮುಕಿದಾಗ ಬೆನ್ನುಮೂಳೆಗೆ ಘಾಸಿ – ಮೊಬೈಲ್ ಶಾಪ್ ಮಾಲೀಕ ಸಾವು

Public TV
1 Min Read

ಮಡಿಕೇರಿ/ಚಿಕ್ಕಮಗಳೂರು: ಸ್ವಿಮ್ಮಿಂಗ್ ಪೂಲ್‌ಗೆ (Swimming Pool) ಧುಮುಕಿದ ವೇಳೆ ಬೆನ್ನುಮೂಳೆಗೆ (Spinal Cord) ಘಾಸಿಯುಂಟಾಗಿ, ಚಿಕಿತ್ಸೆ ಫಲಿಸದೇ ಮೊಬೈಲ್ ಶಾಪ್ ಮಾಲೀಕ (Mobile Shop Owner) ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕುಶಾಲನಗರದ ಮೊಬೈಲ್ ಗ್ಯಾಲರಿ ಮಾಲೀಕ ನಿಶಾಂತ್ (35) ಮೃತ ದುರ್ದೈವಿ. ನಿಶಾಂತ್ ಕೊಡಗಿನ ಕುಶಾಲನಗರದಿಂದ ಚಿಕ್ಕಮಗಳೂರಿಗೆ 10 ಮಂದಿ ಸ್ನೇಹಿತರೊಂದಿಗೆ ಶನಿವಾರ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ಇಲ್ಲಿನ ಖಾಸಗಿ ರೆಸಾರ್ಟ್‌ನ (Resort) ಸ್ವಿಮ್ಮಿಂಗ್ ಪೂಲ್‌ಗೆ ಧುಮುಕುವ ವೇಳೆ ಬೆನ್ನುಮೂಳೆಗೆ ಘಾಸಿಯಾಗಿದೆ. ಇದನ್ನೂ ಓದಿ: Kolar| ವಾಯು ವಿಹಾರಕ್ಕೆ ತೆರಳಿದ್ದ ನಿವೃತ್ತ ಉಪನ್ಯಾಸಕರಿಗೆ ಬೈಕ್ ಡಿಕ್ಕಿ – ಚಿಕಿತ್ಸೆ ಫಲಿಸದೇ ಸಾವು

ತಕ್ಷಣವೇ ನಿಶಾಂತ್‌ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎನಪೋಯಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಶಾಂತ್ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಜೊತೆ ಫೋಟೋಶೂಟ್‌ಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು!

Share This Article