ಅಪಘಾತ ಪ್ರಕರಣಕ್ಕೆ ಸ್ಫೋಟಕ ತಿರುವು – ಕೇರಳ ಮಾಡೆಲ್‍ಗಳಿಗಿತ್ತಾ ಡ್ರಗ್ ಪೆಡ್ಲರ್‌ಗಳ ನಂಟು?

Public TV
2 Min Read

ತಿರುವನಂತಪುರ: ಕೊಚ್ಚಿಯಲ್ಲಿ ನವೆಂಬರ್ 1 ರಂದು ಅಪಘಾತದಲ್ಲಿ ಮೃತಪಟ್ಟ ಮಾಡೆಲ್‍ಗಳಿಗೆ ಡ್ರಗ್ ಪೆಡ್ಲರ್‌ಗಳ ನಂಟು ಇತ್ತಾ ಎಂಬ ಪ್ರಶ್ನೆ ಎದ್ದಿದೆ.

ಮೃತಪಟ್ಟ ಮಾಡೆಲ್‍ಗಳ ಪ್ರಕರಣ ಕುರಿತಂತೆ ತನಿಖೆ ಚುರುಕಾಗಿದ್ದು, ಇದೀಗ ಪಾರ್ಟಿಯಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಡ್ರಗ್ಸ್ ಲಿಂಕ್ ಬಗ್ಗೆ ಅನುಮಾನ ಬಂದಿದೆ.

Kerala Model

ನವೆಂಬರ್ 1 ರಂದು ಫೋರ್ಟ್ ಕೊಚ್ಚಿಯ ನಂ.18 ಎಂಬ ಐಷಾರಾಮಿ ಹೋಟೆಲ್‍ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಭಾಗಿಯಾಗಿದ್ದರು. ಪಾರ್ಟಿ ಬಳಿಕ ಇಬ್ಬರು ರಸ್ತೆ ಅಪಘತಾದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

Kerala Model

ಪ್ರಕರಣಕ್ಕೆ ಸಂಬಂಧಿಸಿ ನಂ.18 ಹೋಟೆಲ್‍ನ ಮಾಲೀಕ ರಾಯ್ ವಯಲಾತ್ ಹಾಗೂ ಹೋಟೆಲ್‍ನ ಐವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಮಾಡೆಲ್‍ಗಳು ಹೋಗುತ್ತಿದ್ದ ಕಾರನ್ನು ಆಡಿ ಕಾರೊಂದು ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತ್ತಿತ್ತು. ಕಾರನ್ನು ಚಲಾಯಿಸುತ್ತಿದ್ದ ಸೈಜು ತಂಕಚನ್‍ಗೆ ಕೊಚ್ಚಿಯಲ್ಲಿ ಡ್ರಗ್ ಪೆಡ್ಲರ್ ಸಂಪರ್ಕವಿದೆ. ಈತ ಬೆಂಗಳೂರಿನಿಂದ ಕೊಚ್ಚಿಗೆ ಡ್ರಗ್ಸ್ ಮಾರಾಟ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆರೋಪ ಬಂದಿದೆ.

 

View this post on Instagram

 

A post shared by Ansi Kabeer (@ansi_kabeer)

ಪಾರ್ಟಿ ನಂತರ ಭೇಟಿಯಾಗುವಂತೆ ಸೈಜು ತಿಳಿಸಿದ್ದ. ಆದರೆ ಆತನ ಆಹ್ವಾನವನ್ನು ಮಾಡೆಲ್‍ಗಳು ನಿರಾಕರಿಸಿದ್ದರು. ಆದಾದ ಬಳಿಕ ಈ ಅಪಘಾತ ನಡೆದಿದೆ. 2021 ಮೇನಲ್ಲಿ ಸೈಜು ಹೋಟೆಲ್ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವೆಸಿದ್ದ ಫೋಟೋ ಲಭ್ಯವಾಗಿದೆ. ಆದರೆ ಹೋಟೆಲ್ ಮಾಲೀಕ ರಾಯ್ ವಯಲಾತ್ ಪೊಲೀಸರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:  1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

ಘಟನೆಯಾಗಿ ಮೂರು ವಾರ ಕಳೆದರೂ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಇದೀಗ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿಜಿ ಜಾರ್ಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *