ಮುಂಬೈ: ಮೀರಾತ್ ರಾಣಿ ಪದ್ಮಿನಿಯಾಗಿ ಅಭಿನಯಿಸಿರುವ `ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಮಿಂಚಿಸಿದ್ದಾರೆ.
ಐತಿಹಾಸಿಕ ಕಥೆಯನ್ನು ಹೊಂದಿರುವುದರಿಂದ ಪಾತ್ರಕ್ಕೆ ತಕ್ಕಂತೆ ವಸ್ತ್ರ ಮತ್ತು ಆಭರಣಗಳನ್ನು ವಿನ್ಯಾಸ ಮಾಡಲಾಗಿದೆ. ದೀಪಿಕಾ ಧರಿಸಿರುವ ಲೆಹೆಂಗಾವನ್ನು ಜರತಾರಿ ರೇಷ್ಮೆ ಬಟ್ಟೆಯಲ್ಲಿ ಕಸೂತಿ ಮಾಡಲಾಗಿದ್ದು, ಲೆಹೆಂಗಾ 26 ಕೆಜಿ ತೂಕ ಇದ್ದು, ಅದರ ದುಪಟ್ಟ 4 ಕೆಜಿ ಇದೆ. ದೀಪಿಕಾ ಅವರು ಧರಿಸಿರುವ ಆಭರಣಗಳು ಹೊರತುಪಡಿಸಿ ಇದೊಂದೇ ಸುಮಾರು 30 ಕೆಜಿಯಷ್ಟು ತೂಕವನ್ನು ಹೊಂದಿದೆ.
ದಿಪೀಕಾ ಇಷ್ಟು ತೂಕದ ಉಡುಪನ್ನು ಧರಿಸಿ ಅಭಿನಯಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ್‍ಲೀಲಾ ಸಿನಿಮಾದಲ್ಲೂ ಸುಮಾರು 30 ಕೆಜಿ ಮತ್ತು ಬಾಜಿರಾವ್ ಮಸ್ತಾನಿ ಸಿನಿಮಾದಲ್ಲೂ 20 ಕೆ.ಜಿ ತೂಕದ ಉಡುಪನ್ನು ಧರಿಸಿದ್ದರು.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ ದೇವದಾಸ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಅವರು 30 ಕೆಜಿ ತೂಕದ ಉಡುಪನ್ನು ಧರಿಸಿದ್ದರು. ಅನುಷ್ಕ ಶರ್ಮಾ ಅವರು `ಏ ದಿಲ್ ಹೈ ಮುಷ್ಕೀಲ್’ ಸಿನಿಮಾದ ಹಾಡೊಂದರಲ್ಲಿ 20 ಕೆ.ಜಿ ತೂಕದ ಲೆಹೆಂಗಾವನ್ನು ಧರಿಸಿದ್ದರು.
ದೀಪಿಕಾ ಧರಿಸಿರುವ ಲೆಹೆಂಗಾವನ್ನು ಡಿಸೈನರ್ ರಿಮ್ಮಲ್ ತಯಾರಿಸಿದ್ದು, ಬಹಳಷ್ಟು ಮುತ್ತು, ರತ್ನ ಹಾಗೂ ಹವಳದಿಂದ ಕಸೂತಿ ಮಾಡಿ ಸಿದ್ಧಪಡಿಸಲಾಗಿದೆ. ರಾಜಸ್ಥಾನಿ ಆಭರಣಗಳನ್ನು ಅಲಂಕರಿಸಿ ಸಂಪೂರ್ಣ ರಜಪೂತ ಯುಗದ ಸೌಂದರ್ಯವನ್ನು ಮರಳಿ ತಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ದೀಪಿಕಾ ಧರಿಸಿರುವ ಆಭರಣವನ್ನು 200 ಮಂದಿ ಸೇರಿ ಬರೋಬ್ಬರಿ 600 ದಿನಗಳನ್ನು ತೆಗೆದುಕೊಂಡು ಸಿದ್ಧ ಪಡಿಸಿದ್ದಾರೆ.
ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ರಾಣಿ ಪದ್ಮಿನಿ (ಪದ್ಮಾವತಿ)ಯನ್ನು ಇಷ್ಟ ಪಟ್ಟಿದ್ದ. ಹೀಗಾಗಿ ರಾಣಿಯನ್ನು ಒಲಿಸಿಕೊಳ್ಳಲು ಚಿತ್ತೂರು ಕೋಟೆಗೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದ. ಅದರಂತೆ 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ಕೋಟೆಗೆ ದಾಳಿ ನಡೆಸಿ ಗುಹಿಲಾ ರತ್ನಸಿಂಹ (ರಾಜಾ ರತನ್ ಸಿಂಗ್) ನನ್ನು ಬಂಧಿಸಿ 8 ತಿಂಗಳು ಸೆರೆಯಲ್ಲಿಟ್ಟಿದ್ದ. ಆದರೆ ಅಲ್ಲಾವುದ್ದೀನ್‍ನಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮಿನಿ (ಪದ್ಮಾವತಿ) ಜೋಹರ್(ಸತಿ ಸಹಗಮನನ ಪದ್ದತಿ) ಮೂಲಕ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಕಥೆಯನ್ನು ಚಿತ್ರ ಹೊಂದಿದೆ.
ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ರಾಣಾ ರತನ್ ಸಿಂಗ್ ಆಗಿ ಶಾಹಿದ್ ಕಪೂರ್, ಅಲ್ಲಾವುದ್ದೀನ್ ಖಿಲ್ಜಿ ಆಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದು, ಡಿಸೆಂಬರ್ 1 ರಂದು ಬಿಡುಗಡೆ ಆಗಲಿದೆ.
https://www.instagram.com/p/BaOeI90lkck/?hl=en&tagged=padmavati
https://www.instagram.com/p/BaOD5GSAoFb/?hl=en&tagged=padmavati
https://www.instagram.com/p/BaOAk3RAc6P/?hl=en&tagged=padmavati
https://www.instagram.com/p/BaNP2geFZm-/?hl=en&tagged=padmavati
https://www.instagram.com/p/BZ6EdyZgphe/?hl=en&taken-by=tanishqjewellery
https://www.instagram.com/p/BZx_fEtgErC/?hl=en&taken-by=tanishqjewellery
https://www.youtube.com/watch?v=HYGgAHo186s