ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

Public TV
1 Min Read

ಜೈಪುರ: ಉದಯಪುರದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಭೀಕರ ಹತ್ಯೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಲ್ಲದೆ ಕೃತ್ಯ ಎಸಗಿದ ಮುಸ್ಲಿಂ ಮೂಲಭೂತವಾದಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಇದೇ ರೀತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು.

ಘಟನೆಯಿಂದ ಎಚ್ಚೆತ್ತ ಕೇಂದ್ರ ಸರ್ಕಾರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಿತ್ತು. ಈ ಬೆನ್ನಲ್ಲೇ ಟೈಲರ್‌ನ ಭೀಕರ ಹತ್ಯೆಗೆ ಬಳಕೆಯಾದ ಆಯುಧ ಸಿದ್ಧಪಡಿಸಿದ ಕಾರ್ಖಾನೆಯನ್ನು ವಶಪಡಿಸಿಕೊಂಡಿರುವುದಾಗಿ ಮಾಹಿತಿ ತಿಳಿದುಬಂದಿದೆ. ಇಷ್ಟಕ್ಕೂ ಹತ್ಯೆಗೆ ಬಳಸಿದ ಆಯುಧ ತಯಾರಾಗಿದ್ದು ಎಲ್ಲಿ? ಹತ್ಯೆಗೂ ಮುನ್ನ ರಿಹರ್ಸಲ್ ನಡೆದಿದ್ದು ಹೇಗೆ? ಎನ್ನುವ ಮಾಹಿತಿಗಳು ಈಗ ಲಭ್ಯವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಪಾಯವನ್ನು ಲೆಕ್ಕಿಸದೇ ಡೇಂಜರ್ ಟ್ರಾಕ್ಟರ್ ಗೇಮ್

ಹೇಗಿತ್ತು ರಿಹರ್ಸಲ್? 
ಟೈಲರ್ ಹತ್ಯೆಗೆ ಬಳಸಿದ್ದ ಆಯುಧವನ್ನು ಉದಯಪುರದ ಎಸ್‌ಕೆ ಇಂಜಿನಿಯರಿಂಗ್ ವರ್ಕ್ಸ್ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ. ಘಟನೆಗೂ ಮುನ್ನವೇ ಅದೇ ಕಾರ್ಖಾನೆಯಲ್ಲಿ ಒಂದು ವೀಡಿಯೋವನ್ನೂ ಚಿತ್ರೀಕರಿಸಿದ್ದಾರೆ. ಹಂತಕರು ಹತ್ಯೆ ಮಾಡುವುದಕ್ಕೂ ಮುನ್ನವೇ ಐಸಿಸ್‌ನ ವೀಡಿಯೋಗಳನ್ನು ವೀಕ್ಷಿಸಿದ್ದಾರೆ, ಒಂದು ವೀಡಿಯೋ ಸಹ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪತಿಯೊಂದಿಗೆ ವಾಸಿಸಲು 30 ಬಾರಿ ಅವಳಿ ಸಹೋದರಿಯ ಪಾಸ್‍ಪೋರ್ಟ್ ಬಳಕೆ

ಈಗಾಗಲೇ ಈ ಬಗ್ಗೆ ಕೇಂದ್ರೀಯ ತನಿಖಾ ದಳ ತನಿಖೆ ಆರಂಭಿಸಿದ್ದು, ಪಾಕಿಸ್ತಾನದ ನಂಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ಗೌಸ್ ಮೊಹಮ್ಮದ್ 2014 ರಲ್ಲಿ 45 ದಿನಗಳ ತರಬೇತಿಗಾಗಿ ಕರಾಚಿಗೆ ಹೋಗಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ.

Live Tv

Share This Article
Leave a Comment

Leave a Reply

Your email address will not be published. Required fields are marked *