ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳೋ ಹೆಣ್ಣುಮಕ್ಳು ಪುಕ್ಸಟ್ಟೆ ಬಸ್ಸಲ್ಲಿ ಓಡಾಡ್ತಾರೆ, ಕಾಂಗ್ರೆಸ್‌ಗೆ ವೋಟ್‌ ಹಾಕಲ್ಲ: ರಾಜಣ್ಣ

Public TV
1 Min Read

ತುಮಕೂರು: ಬಿಹಾರ ಚುನಾವಣೆ ಫಲಿತಾಂಶ ಬೆನ್ನಲ್ಲೇ ಮಾಜಿ ಸಚಿವ ರಾಜಣ್ಣ (K.N Rajanna)ಗ್ಯಾರಂಟಿ ಫಲಾನುಭವಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಧುಗಿರಿಯಲ್ಲಿ ಸ್ವಯಂ ಚಾಲಿತ ವಾಹನ ಚಾಲನ ಪಥ, ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮಹಿಳೆಯರು (Congress) ಕಾಂಗ್ರೆಸ್‌ಗೆ ಮತ ಹಾಕಿಲ್ಲ. ಬಸ್ ಫ್ರೀ ತಗೊಂಡ ಮಹಿಳೆಯರು ಮತ ಹಾಕಿದ್ರೆ ನಾವು ಹೆಚ್ಚಿಗೆ ಸ್ಥಾನ ಗೆಲ್ಲುತ್ತಿದ್ದೆವು. 1-2 ಲಕ್ಷ ರೂ ಸಂಬಳ ತಗೋ ಹೆಣ್ಣು ಮಕ್ಕಳು ಪುಕ್ಸಟ್ಟೆ ಬಸ್ಸಿನಲ್ಲಿ ಓಡಾಡ್ತಾರೆ. ಆದರೆ ಮತ ಹಾಕೋದಿಲ್ಲ ಎಂದಿದ್ದಾರೆ.

ಈ ಹಿಂದೆ ಬಿಜೆಪಿ ಹಿಂದು ಮುಸ್ಲಿಂ ಎಂದು ಚುನಾವಣೆ ಮಾಡ್ತಿತ್ತು. ಬಿಹಾರದಲ್ಲಿ ಅದರ ಪ್ಯಾಟರ್ನ್ ಬದಲಾಗಿದೆ. ಮಹಿಳೆಯರು ಮತ್ತು ಯುವಕರು ಅಂತಾಗಿದೆ. ಹಾಗಾಗಿ ಮಹಿಳೆಯರಿಗೆ ಚುನಾವಣೆ ಮುಂಚೆನೆ 10 ಸಾವಿರ ರೂ. ಕೊಟ್ಟು ಹೆಚ್ಚಿನ ಸ್ಥಾನ ಗೆದ್ದಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮ ಸರ್ಕಾರದಲ್ಲಿ ಮಹಿಳೆಯರಿಗೆ ಕೊಡುವಷ್ಟು ಸೌಲಭ್ಯ ಯಾರಿಗೂ ಕೊಟ್ಟಿಲ್ಲ. ಎಲ್ಲಿ ಬೇಕಾದರೂ ಪುಕ್ಸಟೆ ಹೋಗಬಹುದು. ವಿಧಾನಸೌಧದಲ್ಲಿ ಒಂದು-ಒಂದೂವರೆ ಲಕ್ಷ ಸಂಬಂಳ ತಗೆದುಕೊಳ್ಳುತ್ತಾರೆ. ಓಕೆ…..ಇರಲ್ಲಿ ಅವರೆಲ್ಲಾ….ನಮ್ಮವರೇ ಎಂದಿದ್ದಾರೆ.

ಬಿಹಾರದಲ್ಲಿ ಗೆಲ್ಲಸಿರೋದು ಹೆಣ್ಣು ಮಕ್ಕಳೆ. ರಾತ್ರಿ ನಾನು ಮೋದಿ ಬಾಷಣ ಕೆಳ್ತಾ ಇದ್ದೆ. ಎಂವೈ ಅಂದ್ರೆ ಮೊದಲು ಮುಸ್ಲಿಂ ಯಾದವರು ಅಂತ ಮಾಡಿಕೊಂಡಿದ್ರು, ಈಗ ಎಂವೈ ಅಂದ್ರೆ ಮಹಿಳೆಯರು ಯುವಕರು ಅಂತ ಹೇಳ್ತಾ ಇದ್ರು ಎಂದಿದ್ದಾರೆ.

Share This Article