– ಓಬಿಸಿಗಳಿಗೆ ಲೋಕಸಭೆ, ವಿಧಾನ ಸಭೆ ಚುನಾವಣೆಯಲ್ಲಿ ಮೀಸಲಾತಿಗೆ ಮನವಿ
ತುಮಕೂರು: ಸಂಪುಟ ಪುನಾರಚನೆ (Cabinet Reshuffle) ಯಾರು ಮಾಡುತ್ತಾರೋ ಅವರೇ ಸಿಎಂ ಆಗಲಿದ್ದಾರೆ ಅಥವಾ ಮುಂದುವರಿಯಲಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ (KN Rajanna) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ರಾಜಣ್ಣ, ಸಿಎಂ ಸಿದ್ದರಾಮಯ್ಯರಿಗೆ ಸಂಪುಟ ಪುನಾರಚನೆ ಮಾಡಲು ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಸಿದ್ದರಾಮಯ್ಯನವರೇ (Siddaramaiah) 5 ವರ್ಷ ಸಿಎಂ ಆಗಿ ಮುಂದುವರೆಯೋದು ಖಚಿತ. ಇಲ್ಲ ಅಂದರೆ ರಾಜಕೀಯದಲ್ಲಿ ಯಾವುದೇ ಬೆಳವಣಿಗೆ ನಡೆಯಬಹುದು ಎಂದು ರಾಜಣ್ಣ ಪರೋಕ್ಷವಾಗಿ ನವೆಂಬರ್ ಕ್ರಾಂತಿ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ
ಎಲ್ಲವೂ ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ನಡೆಯಲಿದೆ. ಅಲ್ಲಿಯವರೆಗೂ ಯಾವುದೇ ಬೆಳವಣಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯರೇ ಮುಂದುವರಿಯಬಹುದೂ ಅನ್ನೋದನ್ನು ರಾಜಣ್ಣ ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ
ಚುನಾವಣೆಯಲ್ಲೂ ಮೀಸಲಾತಿಗೆ ಆಗ್ರಹ
ಮುಂದಿವರಿದು ಮಾತನಾಡಿದ ರಾಜಣ್ಣ ಅವರು, ಸಂಪುಟ ಪುನಾರಚನೆ ಆಗಲಿದೆ. ಇನ್ಮುಂದೆ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಇರುವಂತೆ. ಓಬಿಸಿಗಳಿಗೆ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮೀಸಲಾತಿ ಕೊಡಬೇಕು. ಎಸ್ಸಿ-ಎಸ್ಟಿ ಮೀಸಲು ಕ್ಷೇತ್ರ ಇರುವಂತೆ ಓಬಿಸಿ ಮೀಸಲು ಕ್ಷೇತ್ರ ಕೊಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ʻಒಂದ್ ಸಲ ಕಮಿಟ್ ಆದ್ರೆ ತನ್ನ ಮಾತ್ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ

