ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾದ್ರೆ, ನಾನು ಖಾವಿ ಬಟ್ಟೆ ಹಾಕ್ತೀನಿ: ಕೆಎನ್ ರಾಜಣ್ಣ

Public TV
1 Min Read

ಬೆಂಗಳೂರು: ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರು (Chandrashekharnath Swamiji) ಸಿಎಂ ಸ್ಥಾನ ಬಿಟ್ಟು ಕೊಡುವ ಬಗ್ಗೆ ಹೇಳಿಕೆ ನೀಡಿ ಇದೀಗ ಭಾರೀ ಚರ್ಚೆಗೀಡಾಗಿದ್ದಾರೆ.

ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಬಿಟ್ಟು ಕೊಡ್ತಾರೆ ನಡೀರಿ. ಅವರು ಕೇಳಿದ ತಕ್ಷಣ ಬಿಟ್ಟು ಕೊಡೋಕೆ ಆಗುತ್ತಾ?. ಈಗ ಅವರು ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಂತಾ ಎಂದು ಪ್ರಶ್ನಿಸಿದರು.

ಸ್ವಾಮೀಜಿ ಅವರ ಸ್ಥಾನ ಬಿಟ್ಟು ಕೊಡ್ತಾರಾ ಕೇಳಿ. ನಾಳೆಯಿಂದ ನಾನೇ ಸ್ವಾಮೀಜಿ ಆಗ್ತೀನಿ. ನಾನು ಖಾವಿ ಬಟ್ಟೆ ಹಾಕುತ್ತೇನೆ. ಅವರು ಬಿಟ್ಟು ಕೊಡಲ್ಲ, ಇವರು ಬಿಟ್ಟು ಕೊಡಲ್ಲ ಎಂದರು. ಇದನ್ನೂ ಓದಿ: ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿಯವರಲ್ಲ: ಸಿದ್ದರಾಮಯ್ಯ

ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ವಿಚಾರ ಟೈಂ ವೇಸ್ಟ್ ಯಾಕೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಹೇಳಿದ ಹಾಗೇ ನಡೆದುಕೊಳ್ಳಬೇಕು ಅಂತಾ ಏನಿಲ್ಲ. ನಮಗೂ ಸ್ವಂತ ಬುದ್ಧಿ ಇದೆ. ಪ್ರಚಾರಕ್ಕೋಸ್ಕರ ಮಾತಾಡ್ತಾರೆ ಅಂದುಕೊಂಡರೆ ಹಾಗೇ ಆಗಲಿ ಬಿಡಿ ಎಂದು ರಾಜಣ್ಣ ಹೇಳಿದರು.

Share This Article