ಟಿ 20ಯಲ್ಲಿ ವೃತ್ತಿ ಜೀವನ ಶ್ರೇಷ್ಠ ಸಾಧನೆಗೈದ ಕನ್ನಡಿಗ ರಾಹುಲ್

Public TV
1 Min Read

ನವದೆಹಲಿ: ತನ್ನ ಉತ್ತಮ ಆಟದಿಂದ ಸದ್ಯ ಟೀಂ ಇಂಡಿಯದಲ್ಲಿ ಸ್ಟಾರ್ ಆಟಗಾರನಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ಟಿ-20  ರ‍್ಯಾಕಿಂಗ್ ನಲ್ಲಿ ಮುಂಚೂಣಿಗೆ ಬಂದಿದ್ದಾರೆ.

ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯವನ್ನು ಭಾರತ 7 ರನ್‍ಗಳ ಅಂತರದಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಟಿ-20 ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಿದೆ. ಇದರಲ್ಲಿ ಉತ್ತಮವಾಗಿ ಆಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ರಾಹುಲ್, ಐಸಿಸಿ ಬಿಡುಗಡೆ ಮಾಡಿದ ಟಿ-20  ರ‍್ಯಾಕಿಂಗ್ ನಲ್ಲಿ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಸೋಮವಾರ ಐಸಿಸಿ ನೂತನ ಟಿ-20 ರ‍್ಯಾಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಾಹುಲ್ ಅವರು 823 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಟಿ-20 ಸ್ಥಿರ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನದ ಬಾಬರ್ ಅಜಮ್ 879 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಇಬ್ಬರನ್ನು ಬಿಟ್ಟರೆ ಆಸ್ಟ್ರೇಲಿಯಾದ ಆರೋನ್ ಫಿಂಚ್ ಅವರು 810 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದಾರೆ.

ರಾಹುಲ್ ಅವರನ್ನು ಬಿಟ್ಟರೆ ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟಾಪ್-10 ಸ್ಥಾನದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ವಿರಾಟ್ ಕೊಹ್ಲಿ ಅವರು 673 ಅಂಕದೊಂದಿಗೆ 9ನೇ ಸ್ಥಾನ, ಕೀವಿಸ್ ವಿರುದ್ಧ ಅಬ್ಬರದ ಆಟ ತೋರಿದ ರೋಹಿತ್ ಶರ್ಮಾ 662 ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿ ಇದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಯಲ್ಲಿ ಅದ್ಭುತ ಫಾರ್ಮ್‍ನಲ್ಲಿ ಇದ್ದ ರಾಹುಲ್ ಕೀಪಿಂಗ್, ಬ್ಯಾಟಿಂಗ್ ಮತ್ತು ಕೊನೆಯ ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತು ಉತ್ತಮವಾಗಿ ಆಟವಾಡಿದರು. ಈ ಐದು ಪಂದ್ಯಗಳ ಸರಣಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ ಎರಡು ಅರ್ಧಶತಕ ಮತ್ತು ಒಂದು 40 ಪ್ಲಸ್ ರನ್‍ಗಳ ಸಹಾಯದಿಂದ ಒಟ್ಟು 224 ರನ್ ಹೊಡೆದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *