ಬಾಲಿವುಡ್ ನಟಿಯೊಂದಿಗೆ ಕಾಣಿಸಿಕೊಂಡ ಕ್ರಿಕೆಟಿಗ ಕೆಎಲ್ ರಾಹುಲ್

Public TV
1 Min Read

ಮುಂಬೈ: ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್, ಬಾಲಿವುಟ್ ನಟಿ ನಿಧಿ ಅಗರ್‍ವಾಲ್ ಅವರೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://www.instagram.com/p/BjY127NAXBE/?utm_source=ig_embed

ಕೆಎಲ್ ರಾಹುಲ್ ಅವರ ಅಭಿಮಾನಿ ಬಳಗದ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನನ್ನು ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಹುಡುಗಿ ಮಾಡೆಲ್ ಕಮ್ ನಟಿ ನಿಧಿ ಅಗರ್ ವಾಲ್ ಬಾಲಿವುಡ್ ನ `ಮುನ್ನ ಮೈಕೆಲ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ರಾಹುಲ್ ಪಂಜಾಬ್ ತಂಡದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಸದ್ಯ ಜೂನ್ 14 ರಂದು ಬೆಂಗಳೂರಿನಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.

https://www.instagram.com/p/BjZ2T-YgW_3/?utm_source=ig_embed

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 54.91 ಸರಾಸರಿಯಲ್ಲಿ 14 ಪಂದ್ಯಗಳಿಂದ 659 ರನ್ ಗಳಿಸಿ ರಾಹುಲ್ ಟೂರ್ನಿಯ ಟಾಪ್ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಲ್ಲೇ ರಾಹುಲ್ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಟೂರ್ನಿಯ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಹುಲ್ ಟೂರ್ನಿಯ ಅತ್ಯಂತ ರೋಚಕ ಕ್ಷಣ ತನ್ನದಾಗಿತ್ತು. ತನಗೆ ಈ ಕುರಿತು ಹೆಮ್ಮೆ ಇದೆ. ಟೂರ್ನಿಯಲ್ಲಿ ಭಾಗವಹಿಸಿದ ಕಾರಣ ಹಲವು ಸ್ನೇಹಿತರು ದೊರೆತಿದ್ದಾರೆ. ಅಲ್ಲದೇ ಇನ್ನೂ ಸಾಕಷ್ಟು ಕಲಿಯುವುದು ಬಾಕಿ ಇದೆ ಎಂದು ತಿಳಿಸಿದ್ದರು.

https://www.instagram.com/p/BjZxMiNBl9d/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *