ಇಂಡೋ ಅಫ್ಘಾನ್ ಫೈಟ್-ಕನ್ನಡಿಗರಿಗೆ ಸಿಗುತ್ತಾ ಚಾನ್ಸ್?

Public TV
1 Min Read

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಕನ್ನಡಿಗ ಕೆಎಲ್ ರಾಹುಲ್ ಹಾಗು ಪಾಂಡೆಗೆ ಆಡುವ 11ರ ಬಳಕದಲ್ಲಿ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

ಟೂರ್ನಿಯಲ್ಲಿ ಸೋಲಿಲ್ಲದ ತಂಡವಾಗಿ ಮುನ್ನುಗುತ್ತಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಕೆಲ ಬದಲಾವಣೆ ಮಾಡಲು ರೋಹಿತ್ ಮುಂದಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ತಂಡದ ಆರಂಭಿಕರಾಗಿ ಟೂರ್ನಿಯಲ್ಲಿ ಧವನ್ 327 ರನ್, ರೋಹಿತ್ 269 ರನ್ ಸಿಡಿಸಿ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ನಂತರ ಸ್ಥಾನದಲ್ಲಿ ಅಂಬಟಿ ರಾಯುಡು 116 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾ ಮಧ್ಯಮ ಕ್ರಮದಲ್ಲಿ ಧೋನಿ, ಕೇದರ್ ಜಾದವ್, ದಿನೇಶ್ ಕಾರ್ತಿಕ್ ಕ್ರಮವಾಗಿ 40, 27, 78 ಬಾಲ್ ಮಾತ್ರ ಎದುರಿಸಿದ್ದಾರೆ. ಸದ್ಯ ಧೋನಿ ಅವರು ಹೆಚ್ಚಿನ ಕಾಲ ಬ್ಯಾಟಿಂಗ್ ಅವಕಾಶ ನೀಡಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಅವಕಾಶವಿದೆ. ಧೋನಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 33 ರನ್ ಗಳಿಸಿದ್ದರು.

ಉಳಿದಂತೆ ಅಫ್ಘಾನಿಸ್ತಾನ ತಂಡ ಟೂರ್ನಿಯಿಂದ ಹೊರನಡೆದಿದ್ದರು ಕೂಡ ಪಾಕ್ ಹಾಗೂ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ರೋಚಕ ಹೋರಾಟವನ್ನು ನೀಡಿತ್ತು. ಅಫ್ಘಾನ್ ಪರ ಹಸ್ಮತ್ ಶಾಹಿದಿ ಮೂರು ಇನ್ನಿಂಗ್ಸ್ ಗಳಲ್ಲಿ ಅರ್ಧ ಶತಕ ಗಳಿಸಿ ಮಿಂಚಿದ್ದರೆ, ಬೌಲರ್ ರಷಿದ್ ಖಾನ್ ಕೂಡ ಟೀಂ ಇಂಡಿಯಾ ಬ್ಯಾಟ್ಸ್ ಮನ್‍ಗಳಿಗೆ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಇದುವರೆಗೂ ಆಫ್ಘಾನಿಸ್ತಾನ ಭಾರತ ವಿರುದ್ಧ ಏಕೈಕ ಏಕದಿನ ಪಂದ್ಯವಾಡಿದೆ. 2014 ರ ಏಷ್ಯಾಕಪ್ ನಲ್ಲಿ ಅಫ್ಘಾನ್ 8 ವಿಕೆಟ್ ಸೋಲುಂಡಿತ್ತು. ಇತ್ತ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಏಕದಿನ ಕ್ರಿಕೆಟ್‍ನಲ್ಲಿ 96 ವಿಕೆಟ್ ಪಡೆದಿದ್ದು, ವಿಕೆಟ್ ಗಳ ಶತಕ ಬಾರಿಸುವ ಅಂಚಿನಲ್ಲಿದ್ದಾರೆ. ಒಂದೊಮ್ಮೆ ಅವರು ಈ ಸಾಧನೆ ಮಾಡಿದೆ ಭಾರತ 19ನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ಪಡೆಯಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *